ರಂಗಭೂಮಿ ನಟ, ನಾಟಕಕಾರ ಮತ್ತು ನಿರ್ದೇಶಕ. ತೊಗಲು ಬೊಂಬೆಯಾಟದಲ್ಲಿ ಆಸಕ್ತಿ. ನೀನಾಸಂ, ಹೆಗ್ಗೋಡಿನಲ್ಲಿ ರಂಗಶಿಕ್ಷಣ ತರಬೇತಿ. ರಂಗಭೂಮಿ ಕಲೆಯಲ್ಲಿ ಎಂ.ಎ ಪದವಿ. ಮಧುರೈ ವಿಶ್ವವಿದ್ಯಾಲಯದಿಂದ, ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ. ಅಜ್ಜ ಸದಾಶಿವರಾಯರು ಮತ್ತು ತಂದೆ ಶ್ರೀಪಾದರಾಯ ಗರುಡ, ವೃತ್ತಿರಂಗಭೂಮಿಯ ಕಲಾವಿದರಾಗಿದ್ದು ಆ ಪರಂಪರೆಯ ಹಿನ್ನೆಲೆ ಇವರಿಗೂ ಇದೆ.
ತುಘಲಕ್, ಮೃಚ್ಛಕಟಿಕ ಇತ್ಯಾದಿ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಕಂಪನಿ ನಾಟಕಗಳಲ್ಲೂ ಅಭಿನಯಿಸಿದ ಅನುಭವ. ಹ್ಯಾಬ್ಲೆಟ್, ಒಥೆಲೊ ಹುಲಿಯ ನೆರಳು, ಚೂರಿಕಟ್ಟೆ ಇತ್ಯಾದಿ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಕೆ.ವಿ. ಸುಬ್ಬಣ್ಣ-ವ್ಯಕ್ತಿಚಿತ್ರ. ಮಾತಾಡು ಮಾತಾಡು ಗೊಂಬೆಯೇ, (ಶಿಕ್ಷಕರಿಗಾಗಿ ಗೊಂಬೆ ರಂಗಭೂಮಿಯ ಕೈಪಿಡಿ), ಗರುಡ ಸದಾಶಿವರಾಯರು-ವ್ಯಕ್ತಿಚಿತ್ರ, ಮೂರು ಕಿರುನಾಟಕಗಳು ಹಾಗೂ ದಾರಿಯೋಪೋನ ನಾಟಕದ ಭಾವಾನುವಾದ, ಬೆತ್ತಲಾಟ (ನಾಟಕ) ಮತ್ತೊಂದು ನಾಟಕ - ಶಾಂತ ಕವಿಗಳ ವಿಶ್ರಾಂತಿ-ಕನ್ನಡದ ಆದ್ಯ ನಾಟಕಕಾರ ಸಕ್ಕರಿ ಬಾಳಾಚಾರ್ಯ ಉರುಫ್ ಶಾಂತಕವಿಗಳ ಜೀವನ ಸಾಹಿತ್ಯ ಕುರಿತ ಜೀವನ ನಾಟಿಕೆ : ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ ಇವು ಇವರು ರಚಿಸಿರುವ ಕೆಲವು ಕೃತಿಗಳು.
ಈಗಲೂ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಪ್ರಕಾಶ ಗರುಡ ಅವರು ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ