About the Author

ಲೇಖಕ ಪ್ರಕಾಶರಾಜ್ ಮೇಹು ಮೂಲತಃ ಮೇಗಲ ಹುಂಡಿಯ ಚಾಮರಾಜನಗರ ತಾಲೂಕಿನವರು. ತಂದೆ ಪುಟ್ಟಸ್ವಾಮಿ ಗೌಡ. ತಾಯಿ ಸಾವಿತ್ರಮ್ಮ. ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ನೀನಾಸಂ ಪದವಿ ಪೂರೈಸಿದ್ದಾರೆ. ಟಿ ಎಸ್ ನಾಗಾಭರಣ, ಗಿರೀಶ್ ಕಾಸರವಳ್ಳಿ, ಸಿಂಗೀತಂ ಶ್ರೀನಿವಾಸರಾವ್, ಯೋಗರಾಜ್ ಭಟ್, ಮುಂತಾದವರ ಜೊತೆ ಸಹ- ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜಕುಮಾರ್ ಅವರ ವಜ್ರೇಶ್ವರಿ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಸಹ-ನಿರ್ದೇಶಕನಾಗಿ ಕೆಲಸಮಾಡಿದ್ದಾರೆ. "ಡಿ ಎನ್ ಎ" ಸ್ವತಂತ್ರ ನಿರ್ದೇಶನದ ಮೊದಲ ಸಿನಿಮಾ. 2001 ರಲ್ಲಿ ಬರೆದ "ತಿಮ್ಮಜ್ಜಿಯ ಮ್ಯಾಗ್ಲುಂಡಿ" ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಪ್ರಕಾಶ್ ರಾಜ್ ಮೇಹು

(24 Mar 1973)