About the Author

ಇವರು ಮೂಲತಃ ಸುಳ್ಯ ತಾಲೂಕಿನ ಪಂಜದವರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಂಜದಲ್ಲಿ ಪ್ರಾಥಮಿಕ ಶಿಕ್ಷಣ. ವಿದ್ಯಾಬೋಧಿನಿ ಪ್ರೌಢಶಾಲೆ, ಬಾಳಿಲದಲ್ಲಿ ಪ್ರೌಢ ಶಿಕ್ಷಣ, ಶ್ರೀ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು, ಸುಬ್ರಹ್ಮಣ್ಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದು ಹೋಮಿಯೋಪಥಿ ಪದವಿ ಶಿಕ್ಷಣವನ್ನು (BIMS) ಮಂಗಳೂರಿನ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಪಡೆದರು. ಹೋಮಿಯೋಪಥಿ ಪದವಿ ಶಿಕ್ಷಣದಲ್ಲಿ (1994-1999) ಮಂಗಳೂರು ವಿಶ್ವವಿದ್ಯಾನಿಲಯ ದಿಂದ ಪ್ರಥಮ ರ್ಯಾಂಕ್ ಗಳಿಸಿ; ಅಖಿಲ ಭಾರತ ಹೋಮಿಯೋಪಥಿ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದರು. ಮುಂದೆ ಸ್ನಾತಕೋತ್ತರ ಪದವಿಯನ್ನು (MD-Homoeopathy) ಹೈದರಾಬಾದ್‌ನ ಸರಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿ 2003 ರಿಂದ ಭಾ.ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇರ್ಪಡೆಗೊಂಡರು, ಆದೇ ಸಂಸ್ಥೆಯಲ್ಲಿ ಸಹಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾಗಿ ಕೆಲಸವನ್ನು ನಿರ್ವಹಿಸುತ್ತಾ ಬಂದಿರುತ್ತಾರೆ. ಹೋಮಿಯೋಪಥಿ ಕೈಪಿಡಿ ಹಾಗೂ ಕಾಣದ ಕೈಯಲ್ಲಿ ಕಾಣುವ ಆರೋಗ್ಯ ಕೃತಿ ಪ್ರಕಟಗೊಂಡಿದೆ.

ಪ್ರಸನ್ನ ಕುಮಾರ್‌ ಕೆ