About the Author

ಡಾ. ಆರ್. ಚಲಪತಿ ಅವರು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿದ್ದಾರೆ.

ಅದಕ್ಕೂ ಮುನ್ನ ಬೆಂಗಳೂರಿನ ನಾಗಾರ್ಜುನ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿಯ ನಂದಿಹಳ್ಳಿ ಪಿಜಿ ನೆಂಟರ್ಗಳಲ್ಲಿ ಅಧ್ಯಾಪಕರಾಗಿದ್ದರು.

ಅಖಿಲ ಭಾರತೀಯ ಸಂತ ಕನಕದಾಸರ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳಲ್ಲಿ ಸಂಶೋಧನೆ ಕೈಗೊಂಡಿದ್ದರು.

ಚಲಪತಿ ಅವರ ಪ್ರಕಟಿತ ಕೃತಿಗಳು: ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ, ನಮ್ಮದೇ ತಿಳಿವಿನ ದಾರಿಯಲ್ಲಿ, (ಬರವಣಿಗೆಯ ಚಹರೆಗಳಲ್ಲಿ ಬದುಕಿನ ಓದು),  ನುಡಿಯೊಡನೆ: (ಕಲಿಕೆಯ ಕನ್ನಡ ಪಠ್ಯಗಳಲ್ಲಿನ ಕನ್ನಡದ ತೊಡಕುಗಳನ್ನು ಕುರಿತ ಬರವಣಿಗೆ), ತಂತಿ ಮೇಲಿನ ನಡಿಗೆ (ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತುಕತೆ) , ಪಠ್ಯ ಪುಸ್ತಕಗಳು ಮತ್ತು ಸಾಂಸ್ಕೃತಿಕ ರಾಜಕಾರಣ, (ಪಠ್ಯಕ್ರಮದ ನಿರ್ಧಾರದ ಹಿಂದೆ ಪ್ರವೃತ್ತವಾಗಿರುವ ನಿರ್ದಿಷ್ಟ ಜಾತಿಗಳ ಯಜಮಾನಿಕೆಯ ರಾಜಕಾರಣವನ್ನು ಅನಾವರಣಗೊಳಿಸಿರುವ ಓದು), ಸಾಹಿತ್ಯ ಮತ್ತು ಸಾಹಿತ್ಯದಾಚೆಗೆ, (ಭಾಷೆ ಮತ್ತು ಸಾಹಿತ್ಯ ರಚನೆ, ಸಾಹಿತ್ಯ ಸಂಪಾದನೆ ಮತ್ತು ಚಿಂತನೆಗಳಲ್ಲಿನ ಅಧಿಕಾರ

ಚಲನೆಯ ಅನಧಿಕೃತ ವರನೆಗಳ ಓದು), ತೊಡಕುಗಳು ಮತ್ತು ತೋರುದಾರಿ (ಸಂಪಾದನೆ, ಕಲಿಕೆಯ ಬಗೆಗಿನ ಕೆ.ವಿ. ನಾರಾಯಣ ಅವರ ಚಿಂತನೆಗಳು), ಸಾಂಸ್ಕೃತಿಕ ಸಜ್ಜನ ಎಂ.ವೈ.ಘೋರ್ಪಡೆ (ಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ.

ಆರ್‌. ಚಲಪತಿ