About the Author

ಕಲ್ಯಾಣಮ್ಮನವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ. 1892 ರಲ್ಲಿ ಜನಿಸಿದ ಇವರು ಸಾಹಿತ್ಯ ಸೇವೆಯೊಂದಿಗೆ ಸಮಾಜ ಸೇವೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದವರು. ತಾವು ಓದಿದ ಮತ್ತು ತಿಳಿದುಕೊಂಡ ವಿಷಯಗಳನ್ನು ಕುರಿತ  ಬರೆದ ಕಥೆಗಳು, ಲೇಖನಗಳನ್ನು "ಸಾಧ್ವಿ, ಕಂಠೀರವ, ವಿದ್ಯಾದಾಯಿನಿ" ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾದವು.ಇವರು ತಮಗೆ ಬಂದ ವಿಧವಾಪಟ್ಟದಿಂದ ವಿಚಲಿತರಾಗದೆ ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತಮ್ಮಂತಹ ಇತರೆ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ಇದಕ್ಕಾಗಿ "ಶ್ರೀ ಶಾರದ ಸ್ತ್ರೀ  ಸಮಾಜ"ವನ್ನು 1913 ಏಪ್ರಿಲ್ 26 ರಲ್ಲಿ ಸ್ಥಾಪಿಸಿದರು. “ಏನು ಸಂಬಂಧ, ದೇವನೆಲ್ಲಿ, ದೇವಿಯ ತ್ಯಾಗ, ಫಲಿತಾಂಶ” ಇವರ ಕಥಾಸಾಹಿತ್ಯಗಳು. ವಸುಂಧರಾ, ಪ್ರಿಯಂವದಾ, ನಿರ್ಭಾಗ್ಯವನಿತೆ, ಭಕ್ತಿಮೀರಾ, ಮಾಧವಿ ಇವರ ಪ್ರಮುಖ ಕಾದಂಬರಿಗಳು. ಇವರು ಬರೆದ ಸಣ್ಣ ಕಥೆಗಳಲ್ಲಿ ಪ್ರಮುಖವಾದವುಗಳೆಂದರೆ ಅಂಜುಬುರುಕಿ, ಗ್ರಹಣ, ಒಲ್ಲದ ಹೆಂಡತಿ, ನಿರ್ಭಾಗ್ಯ ನಳಿನಿ, ಮಾರ್ಜಾಲ, ದೈವೇಚ್ಛೆ. ಇವರು ಸುಮಾರು 21 ನಾಟಕಗಳನ್ನು ಬರೆದಿದ್ದಾರೆ. ಪ್ರಮುಖವಾದವುಗಳೆಂದರೆ "ಸ್ನೇಹ ಲತೆ, ಹಿಂದೂ ಭಾಗ್ಯೋದಯ, ಬ್ಯಾರಿಸ್ಟರ್ ರಾಮಚಂದ್ರನ್, ನಿರ್ಮಲೆ, ಇಪ್ಪತ್ತನೆಯ ಶತಮಾನದ ಅಳಿಯ, ಹುಡುಗರು ಮತ್ತು ಹುಡುಗಿಯರು,  ಶೂರ್ಪನಖಾಭಂಗ, ಸತೀ ಪದ್ಮಿನಿ". 

ಇವಲ್ಲದೆ ಮಕ್ಕಳಿಗಾಗಿ ಕಿಟ್ಟು ಕಂಡ ಗಾಂಧಿ, ಗಾಂಧೀಜಿ  ಮತ್ತು ಮಕ್ಕಳು, ಸ್ವಾಮಿ ವಿವೇಕಾನಂದ,ಶ್ರೀ ಮಹದೇವ ಗೋವಿಂದ ರಾನಡೆ,ಮೊದಲಾದ ಮಹನೀಯರ ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. ರಾಣಿ ದುರ್ಗಾವತಿ,ಮಹಾರಾಣಿ ಸ್ವರ್ಣಮಯಿ, ಮೊದಲಾದ ವ್ಯಕ್ತಿಚಿತ್ರಗಳು ಹಾಗೂ ಕವಯತ್ರಿ ಪದ್ಮಾವತಿ ದೇವಿ,ವಿಜಯಲಕ್ಷ್ಮಿ ಪಂಡಿತ, ಶಾರದಾದೇವಿ,ಪಂಡಿತ ರಮಾಬಾಯಿ ಕೇಳ್ಕರ್ ಮೊದಲಾದ ಮಹಿಳೆಯರ ಜೀವನ ವಿವರಗಳನ್ನು ಪ್ರಕಟಿಸಿದ್ದಾರೆ. ವಂಗ ಸಾಹಿತ್ಯ ಸಂಘದವರಿಂದ ’ವಿದ್ಯಾವಿನೋದಿನಿ’ ಬಿರುದು, ಕೃಷ್ಣರಾಜ ಒಡೆಯರ್ ಅವರಿಂದ ’ಸಾರ್ವಜನಿಕ ಸೇವಾ ಸುವರ್ಣ ಪದಕ’ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇವರು  'ಶಾರದಾ ಸೀ ಸಮಾಜ'ದ ಸ್ಥಾಪಕಿ, ಕರ್ನಾಟಕ ಭಗಿನೀ ಮಂಡಲ ಪರಿಷತ್ತು, ಬೆಳಗಾವಿ ಕಾಂಗ್ರೆಸ್‌ನ ಅಧ್ಯಕ್ಷೆ; ಬಾಲ ಕರ್ನಾಟಕ ಸಂಘದ ಅಧ್ಯಕ್ಷೆ, ಪಠ್ಯಪುಸ್ತಕ ಸಮಿತಿಯ ಸದಸ್ಯೆ, ಬೆಂಗಳೂರಿನ ಚಾಮರಾಜಪೇಟೆಯ ಅಖಿಲ ಕರ್ನಾಟಕ ಮಕ್ಕಳ ಕೂಟದ ಸಾಪನೆ 1938, ಬೆಂಗಳೂರು ನಗರಸಭೆಯ ಉಪಾಧ್ಯಕೆ ೧೯೩೮; 'ಸರಸ್ವತಿ' ಪತ್ರಿಕೆಯ ಸಂಪಾದಕಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಮಹಿಳಾ ಸದಸ್ಯೆಯಾಗಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಆರ್‌. ಕಲ್ಯಾಣಮ್ಮ