About the Author

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಮೇನಹಳ್ಳಿ ಗ್ರಾಮದ ಡಾ. ಆರ್.ವಿ. ಚಂದ್ರಶೇಖರ ರಾಮೇನಹಳ್ಳಿ ಅವರು ಶಿವಾರಪಟ್ಟಣದಲ್ಲಿ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಪೂರೈಸಿ, ಮಾಲೂರಿನಲ್ಲಿ ಪದವಿ ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್. ಡಿ ಪಡೆದಿದ್ದಾರೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದು, ಜಾಗತೀಕರಣ ಮತ್ತು ಸಮಾಜ, ಭಾರತದ ಆರ್ಥಿಕತೆ ಮತ್ತು ವಿಶೇಷ ವಲಯಗಳು, ಭೂಮಿ ಮತ್ತು ಬದುಕು, ಅಭಿವೃದ್ಧಿ ಎಂಬ ಅವನತಿ,  ಅಭಿವೃದ್ಧಿ ಕೊಡಲಿಗೆ ಒಕ್ಕಲುತನದ ಕೊರಳು, ಡಿಟೆಕ್ಟೀವ್ ಡೆವೆಲಪ್ ಮೆಂಟ್, ಸಮಕಾಲೀನ ಮಹಿಳೆ ಮತ್ತು ಆರೋಗ್ಯ-ಒಂದು ಸಮಾಜಶಾಸ್ತ್ರೀಯ ಚಿಂತನೆ, ಭಾರತದ ಮಹಿಳೆಯರ ಆರೋಗ್ಯದ ಮೇಲಿನ ಪರಿಣಾಮಗಳು, ಅಭಿವೃದ್ಧಿ ಸಮಾಜಶಾಸ್ತ್ರ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

.  

ಆರ್.ವಿ. ಚಂದ್ರಶೇಖರ್ ರಾಮೇನಹಳ್ಳಿ