About the Author

ಸುಮಾರು ಐವತ್ತು ವರ್ಷಗಳ ಸುಧೀರ್ಘ ಕಾಲ ಪತ್ರಿಕೋದ್ಯಮಿಯಾಗಿ, ಸಮಾಜವಾದಿಯಾಗಿ, ಶೋಷಿತರ ದನಿಯಾಗಿ, ಕನ್ನಡಪರ ಹೋರಾಟಗಾರರಾಗಿ, ಮಾನವ ಪ್ರೇಮಿಯಾಗಿ ಅವರ ಕೊಡುಗೆ ಅಪಾರ. ಸೌಲಭ್ಯ ಮತ್ತು ಹಣಕಾಸಿನ ಕೊರತೆಯ ನಡುವೆಯೂ ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ, ಸ್ಥಳೀಯ ಸುದ್ದಿಗಳನ್ನು ನೀಡಿ, ಜನರಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ ಅವರು ನಿಜವಾಗಿಯೂ 'ಜನರ ಪತ್ರಕರ್ತರು'! 1972ರಲ್ಲಿ ಆಂದೋಲನ ಪತ್ರಿಕೆ ಆರಂಭಿಸಿದ್ದರು.

ರಾಜಶೇಖರ ಕೋಟಿ ಮೂಲತಃ ಗದಗ್ ಜಿಲ್ಲೆ ಹುಯಿಲಗೋಳದವರು. ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ಗದಗ್‍ನಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಅಚ್ಚು ಮೊಳೆ ಸಹಾಯಕರಾಗಿ ಕೆಲಸ ಆರಂಭಿಸುತ್ತಾರೆ. ಶಾಲಾ ದಿನದಿಂದಲೇ ಪತ್ರಿಕೆ ಬಗ್ಗೆ ಆಸಕ್ತಿ ಹೊಂದಿದ್ದ ರಾಜಶೇಖರ್ ಕೋಟಿ ಅವರು ತಮ್ಮ 13ನೇ ವಯಸ್ಸಿನಲ್ಲಿ ಪಾಟೀಲಪುಟ್ಟಪ್ಪ ಅವರಿಂದ ಪ್ರಭಾವಿತರಾಗಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಪಾಟೀಲ್ ಪುಟ್ಟಪ್ಪ ಅವರ ವಿಶ್ವವಾಣಿ ಪತ್ರಿಕೆಗೆ ವರದಿಗಾರರಾಗಿ, ನಂತರ 2 ವರ್ಷ 'ಪ್ರಪಂಚ' ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಧಾರವಾಡಕ್ಕೆ ಬರುತ್ತಿದ್ದ ಸಮಾಜವಾದಿಗಳಿಂದ ಪ್ರಭಾವಿತರಾಗಿದ್ದ ಕೋಟಿ ಅವರು ಸಮಾಜವಾದಿ ಚಳುವಳಿಯಿಂದ ಪ್ರಭಾವಿತ ರಾಗಿ 1972 ರಲ್ಲಿ ಆಂದೋಲನ ಪತ್ರಿಕೆ ಆರಂಭಿಸುತ್ತಾರೆ. ಸಾಹಿತಿ ಪೂರ್ಣ ಚಂದ್ರ ತೇಜಸ್ವಿ , ಶಾಂತವೇರಿ ಗೋಪಾಲಕೃಷ್ಣ ಜೆ.ಎಚ್. ಪಟೇಲ್, ಪ್ರೊ. ಎಂ.ಡಿ ನಂಜುಂಡಸ್ವಾಮಿ, ಎಂ.ಡಿ ಸುಂದರೇಶ್ ಪ್ರೊ ರಾಮದಾಸ್, ಕಡಿದಾಳ ಶಾಮಣ್ಣ ಅವರಿಂದ ಕೋಟಿ ಅವರು ಪ್ರಭಾವಿತರಾಗಿ ಪತ್ರಿಕೆ ಆರಂಭಿಸುತ್ತಾರೆ. ಎಂ ಆರ್ ಶಿವಣ್ಣ, ಅವರ ಜೊತೆ ಹುಬ್ಬಳ್ಳಿಯಿಂದ ಬಂದು ಜೊತೆಯಾಗಿ ಆಂದೋಲನ ನಡೆಸಿದವರು. ಮೈಸೂರಿನ ಅನೇಕ ಪತ್ರಕರ್ತರು ಆಂದೋಲನದೊಂದಿಗೇ ತಮ್ಮ ವೃತ್ತಿ ಜೀವನ ಆರಂಭಿಸಿದವರು. ದಿನಾಂಕ:23-11-2017ರಂದು ರಾಜಶೇಖರ ಕೋಟಿಯವರು ಹೃದಯಾಘಾತದಿಂದ ನಿಧನರಾದರು.

 

ರಾಜಶೇಖರ ಕೋಟಿ

(06 Jul 1947-23 Nov 2017)