About the Author

ನಿವೃತ್ತ ಶಿಕ್ಷಕಿಯಾದ ರತ್ನಾ ಮೂರ್ತಿ (ಎಸ್. ಎಂ. ನಾಗರತ್ನ) ಅವರು ಬಿ.ಎಸ್ಸಿ., ಬಿ.ಎಡ್., ಎಂ.ಎ. ಪದವೀಧರೆ. 1949ರ ಸೆಪ್ಟೆಂಬರ್‌ 15ರಂದು ಜನಿಸಿದರು. ತಂದೆ ಎಸ್.ಎನ್. ಮಂಜುನಾಥ್ ಮತ್ತು ತಾಯಿ ಮಹಾಲಕ್ಷ್ಮಿ.

ಕನಸು ನನಸುಗಳ ನಡುವೆ, ಮೇಘಲೀಲೆ, ಚೈತ್ರದ ಚಿಗುರು, ವಿಶ್ವಾರ್ಚನೆ, ನೆತ್ತರಿನ ನಂಟಿರದೆ, ವಾಸ್ತವ, ಗಡಿಯನೊದ್ದು(ಕಥಾ ಸಂಕಲನ), ವಿಕಲಚೇತನ, ನೆಲೆ ತಪ್ಪಿದಾಗ (ಕಾದಂಬರಿಗಳು), ಒಂದು ತೋಟದ ಕಥೆ (7 ನಾಟಕಗಳ ಸಂಕಲನ) ಮುಳುಗಿ ತೇಲಾಡಿದನು (ಸ್ವಂತ ರಚನೆಯ ಚೆನ್ನಕೇಶವಾಂಕಿತ 216 ಕೀರ್ತನೆಗಳು), ಹೇಗೆ ನಿಮ್ಮನೊಲಿಸಲಿ (ಸ್ವಂತ ರಚನೆಯ ಚೆನ್ನಕೇಶವಾಂಕಿತ 365 ಕೀರ್ತನೆಗಳು), 24 ಮುಂಡಿಗೆಗಳು (ದಾಸ ಸಾಹಿತ್ಯದ ಸ್ವಂತ ರಚನೆಗಳು), ಮತ್ತಷ್ಟು ಮುಂಡಿಗೆಗಳು ಮತ್ತು ಉಗಾಭೋಗಗಳು.

ಗವಾಕ್ಷಿ ಮತ್ತು ಮರೆಯಲಾಗದ ಕಥೆಗಳು (ಅನುಭವ ಕಥನ) ಅಂಧರ ಬೈಲ್ ಲಿಪಿಗೆ ತರ್ಜುಮೆಯಾಗಿದೆ. ಅಪರೂಪದ ಕಥೆಗಳು, ಬೂದಿಯ ಹಗ್ಗ, ಏಳು ಕೊಂಬಿನ ಆನೆ (ಮಕ್ಕಳ ಸಾಹಿತ್ಯ).

ಗೊರೂರು ಪ್ರತಿಷ್ಠಾನದ ಕಾವ್ಯಪ್ರಶಸ್ತಿ, ಕಾಕೋಳು ಸರೋಜಾದೇವಿ ಕಾದಂಬರಿ ಪ್ರಶಸ್ತಿ, ಗುಣಸಾಗರಿ ನಾಗರಾಜ್ ಮಕ್ಕಳ ಪುಸ್ತಕ ಬಹುಮಾನ ಇವರಿಗೆ ಲಭಿಸಿದೆ.

ಬೆಂಗಳೂರು ಆಕಾಶವಾಣಿಯ ಮಕ್ಕಳ ವಿಭಾಗಕ್ಕಾಗಿ ಪೌರಾಣಿಕ, ಸಾಮಾಜಿಕ, ಜಾನಪದ ಐತಿಹಾಸಿಕ ಘಟನೆಗಳನ್ನಾಧರಿಸಿದ ನಾಟಕಗಳು, ಗೀತರೂಪಕಗಳು, ಜೀವನ ಚಿತ್ರಗಳ ರಚನೆ, ನಿರ್ದೇಶನ. ಬೆಂಗಳೂರು ಆಕಾಶವಾಣಿಯಲ್ಲಿ ಚಿಂತನ ಮತ್ತು ಭಾಷಣಗಳು. ಅನಾಥಾಶ್ರಮದ ಮಕ್ಕಳಿಗೆ ಪಾಠಹೇಳಿ, ಕಥೆಗಳನ್ನು ಹೇಳಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತರಬೇತಿ ನೀಡುವುದು, ವೃದ್ದಾಶ್ರಮದ ಹಿರಿಯ ಮಾತೆಯರಿಗೆ ಕಥೆಗಳನ್ನು ಹಾಡುಗಳನ್ನು ಹೇಳುವುದು, ಸಹನಾ ಅಂಗವಿಕಲರ ಸೇವಾ ಸಂಸ್ಥೆಯೊಂದಿಗೂ ಆತ್ಮೀಯ ಒಡನಾಟ. ಬ್ರೈಲ್ ಪುಸ್ತಕಗಳ ತಯಾರಿಕೆಗೆ ನೆರವಾಗಲು ಪುಸ್ತಕಗಳನ್ನು ಓದುವ ಕೆಲಸ. 'ಸಹನಾ' ಸಂಸ್ಥೆಯವರು ಸ್ಥಾಪಿಸಿರುವ 'ಸಹನಾ ಅಂಧ ಕಾಲೇಜು ವಿದ್ಯಾರ್ಥಿನಿಯರ ಉಚಿತ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಪಾಠ ಹೇಳಿ ಕೊಡುವುದು ಪಾಠಗಳನ್ನು ಓದುವುದು ಇವರ ನೆಚ್ಚಿನ ಹವ್ಯಾಸ.

 

ರತ್ನಾ ಮೂರ್ತಿ (ಎಸ್. ಎಂ. ನಾಗರತ್ನ)