About the Author

ಲೇಖಕ ರೇವಣ್ಣಸಿದ್ದಯ್ಯ ರುದ್ರಸ್ವಾಮಿ ಮಠ ಅವರ 1932 ಡಿಸೆಂಬರ್ 11ರಂದು ಗುಲಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕಿನ ರಂಗ ಪೇಟೆಯಲ್ಲಿ ಜನಿಸಿದರು ರುದ್ರಸ್ವಾಮಿ. ‘ಗಾಳಿ, ಹಾಗೆಲ್ಲಾ ಹೀಗೆ, ಪ್ರಾಯಶ್ಚಿತಕ್ಕೆ ಬೆರಳ್, ಕಲಬುರ್ಗಿಯ ಕಗ್ಗೋಟೆ, ತನ್ನನ್ನು ತಾನು ತಿಳಿದ ಮೇಲೆ, ಕರ್ನಾಟಕದ ಹುಲಿ, ಪ್ರಸಾರವಾಗದ ಒಂದು ನಾಟಕ, ಈ ಯುದ್ಧ ನಮಗೆ ಸಾಕು, ರಾಗ ಸುಧೆ, ಬಂಗಾರದ ಕನಸು, ದ್ರೋಣಾಚಾರಿ ಶಾಲೆಗಳು, ಕಡಕೋಳದ ಬೆಳಕು, ಸಾವಿತ್ರಿ, ಶಬರ ಶಂಕರ ವಿಲಾಸ’ ಮುಂತಾದ ಬಾನುಲಿ ನಾಟಕಗಳನ್ನು ರಚಿಸಿದ್ದಾರೆ. 

‘ಹಲಗೆ ಬಳಪ, ರವ, ದಾಳಿಂಬ, ಸುರಪೂರ ತಾಲ್ಲೂಕ ದರ್ಶನ’ ಅವರ ಇತರೆ ಸಾಹಿತ್ಯ ಪ್ರಕಾರದ ಕೃತಿಗಳು. ಕನ್ನಡ ಮಾತ್ರವಲ್ಲದೆ ಉರ್ದು ಸಾಹಿತ್ಯದಲ್ಲೂ ಸಹ ಕೃಷಿ ಸಾಧಿಸಿರುವ ಅವರು ‘ಅನೋಖಿ ಶಾದಿ - ಫಕೀರಕಿ ತೀನ ಲಕೀರೆ’ ಎಂಬ ನಾಟಕ ಸಂಕಲನವನ್ನು ಹೊರತಂದಿದ್ದಾರೆ.

ಖ್ಯಾತ ಕವಿ ದಿ. ಸುಲೇಮಾನ ಖತೀಬರ ‘ಕೇವಡೇಕಾಬನ್’ ಕೃತಿಯನ್ನ ಕನ್ನಡಕ್ಕೆ ಅನುವಾದಿಸಿದ್ದಾರೆ. 

‘ನೆಲ ಮುಗಿಲು, ಬಂಗಾರದ ಕನಸು’ ಅವರ ಮತ್ತಿತರ ರಂಗ ನಾಟಕ ಕೃತಿಗಳು. 

ರಂಗ ನಾಟಕ ಮಾತ್ರವಲ್ಲದೆ ಮಕ್ಕಳ ಸಾಹಿತ್ಯದಲ್ಲೂ ಕೃಷಿ ಸಾಧಿಸಿರುವ ಅವರು ‘ಮಹತ್ಮಾಗಾಂಧಿ, ಲೋಕಮಾನ್ಯ ತಿಲಕ’ ವ್ಯಕ್ತಿ ಕೃತಿಗಳನ್ನು ರಚಿಸಿದ್ದಾರೆ. 

‘ಗುರುಗವಾನ, ಆಕಳು, ಮಲಿಕ್ ಜಹಾಂ ಬೇಗಂ, ಅನಿವಾರ್ಯತೆ, ಚುಕ್ಕೋಳಾಟ, ಕೆಳದಿ ಚೆನ್ನಮ್ಮ’ ಅವರ ನಾಟಕಗಳು ಬಾನುಲಿಯಲ್ಲಿ ಪ್ರಸಾರ ಕಂಡಿವೆ. ‘ವರ್ಣ ಬಿಂಬ (ಚಿತ್ರ ಕಲಾಕಾರರ ವ್ಯಕ್ತಿ ಚಿತ್ರಗಳ ಸಂಗ್ರಹ), ಶಿವಶರಣರು ಮತ್ತು ಸೂಫಿಮತ, ಸುರಪೂರದ ಸಿಂಹ ಮತ್ತು ಇತರ ನಾಟಕಗಳು’ ಅವರ ಮತ್ತಿತರ ಕೃತಿಗಳು. 

ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ 1987ರಲ್ಲಿ ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ, ಬೆಂಗಳೂರು ಆಕಾಶವಾಣಿ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 1994ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕಾರ, ಗಣರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂತಾದವು ಅವರಿಗೆ ಸಂದಿವೆ. 

ರೇವಣಸಿದ್ಧಯ್ಯ ರುದ್ರಸ್ವಾಮಿ ಮಠ

(11 Dec 1932)