About the Author

ಡಾ. ಆರ್.ಎಚ್‌.ಕುಲಕರ್ಣಿ( ಜ. 1968) ರಾಷ್ಟ್ರದ ಮುಂಚೂಣಿ ಕಲಾ ಇತಿಹಾಸಕಾರರಲ್ಲಿ ಒಬ್ಬರು. ಕೊಪ್ಪಳ ಜಿಲ್ಲೆಯ ನಿಲೋಗಲ್‌' ಗ್ರಾಮದವರು. ಆರಂಭದಿಂದಲೂ ಕಲೆ-ಕಲಾ ಸಾಹಿತ್ಯದಲ್ಲಿ ಆಸಕ್ತಿ, ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಕಲಾ ಇತಿಹಾಸ ವಿಷಯದಲ್ಲಿ ಬಿಎಫ್ ಎ ಪದವಿ (1989). ನಂತರ ಬರೋಡಾ ಮಹಾರಾಜ ಸಯ್ಯಾಜೀರಾವ್ ವಿಶ್ವವಿದ್ಯಾಲಯದಿಂದ ಕಲಾ ಇತಿಹಾಸದಲ್ಲಿ ಎಂ.ಎ. ಪದವಿ (1992). ಮರಳಿ ಮೈಸೂರಿಗೆ ಬಂದು ಕಾವಾದಲ್ಲಿಯೇ ಅಧ್ಯಾಪನ, 1993 ರಿಂದ ಯು ಜಿ ಸಿ ಸಂಶೋಧನಾ ಫೆಲೋಶಿಪ್‌ನೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪದವಿಗೆ ಸಂಶೋಧನೆ ಪ್ರಾರಂಭಿಸಿ, 2001 ರಲ್ಲಿ ಪ್ರಿ ಅಂಡ್ ಅರ್ಲಿ ಚಾಲುಕ್ಯಾ ಆರ್ಟ್ ಇನ್ ಕರ್ನಾಟಕ ವಿಷಯದಲ್ಲಿ ಪಿ ಎಚ್ ಡಿ ಪದವಿ ಪಡೆದರು. ನಿರಂತರ ಅಧ್ಯಾಪನ ಸಂಶೋಧನೆ ಮುಂದುವರಿದು ಶಾಸನ ಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ಹಾಗೂ ಕರ್ನಾಟಕ ವಿವಿ ಧಾರವಾಡದ ಇತಿಹಾಸ ಹಾಗೂ ಪುರಾತತ್ತ್ವ ಶಾಸ್ತ್ರದ ಎಂ.ಎ. ಪದವಿ. 2007 ರಿಂದ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ಕೆಲಸ. ಕರ್ನಾಟಕದ ಕಲೆ-ಶಿಲ್ಪ ವಾಸ್ತುಕಲೆಯ ವಿವಿಧ ಆಯಾಮಗಳನ್ನು ಕುರಿತಾದ 70 ಅಧಿಕ ಸಂಶೋಧನಾ ಪ್ರಬಂಧಗಳ(ಕನ್ನಡ-ಇಂಗ್ಲೀಷ್) ಪ್ರಕಟಣೆ. ರಾಷ್ಟ್ರವ್ಯಾಪಿ ಉಪನ್ಯಾಸಗಳು, 9 ಪುಸ್ತಕಗಳ ರಚನೆ. ಕರ್ನಾಟಕದ ಮತ್ತು ಭಾರತೀಯ ಕಲಾ ಇತಿಹಾಸದಲ್ಲಿ ಅಧಿಕಾರಯುತವಾಗಿ ವಿವೇಚಿಸಬಲ್ಲ ವಿದ್ವತ್ತು ಅವರಲ್ಲಿದೆ. ಪ್ರಮುಖ ಕೃತಿಗಳು: ಕಿನ್ನಾಳ ಕಲೆ(1992), ಪ್ರೆಆಂಡ್ ಅರ್ಲಿ ಚಾಲುಕ್ಯ ಸ್ಕಲ್ಪ್‌ಚರ್ಸ್ (2009) ಕಲಾವಿದನ ಹೆಜ್ಜೆ ಗುರುತುಗಳು-ಯುಸುಫ್ ಅರಕ್ಕಾಲ್ (2010), ಕರ್ನಾಟಕದ ಆರಂಭಿಕ ಶಿಲ್ಪಕಲೆ(2009-2010) ವಿಜಯನಗರ ಶಿಲ್ಪಕಲೆ(2019) ಸೈಂಡರ್ಸ್‌ ಆಫ್ ಗಂಜೀಫಾ ಆರ್ಟ್(ಸಂ: 2019) ರತ್ನ ದೀಪಃ-ಪ್ರೊ, ರತನ್ ಪರಿಮೂ ಅಭಿನಂದನ ಗ್ರಂಥ (ಸಂ:2021), ದೃಶ್ಯಕಲಾ ಕಮಲ- ಪ್ರೊ.ಎಂ.ಜೆ.ಕಮಲಾಕ್ಷಿ ಅಭಿನಂದನ ಗ್ರಂಥ (ಸಂ:2021), ಪ್ರಸ್ತುತ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಕಲಾಇತಿಹಾಸ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಂಶೋಧನಾ ಕೇಂದ್ರ ಸಂಯೋಜಕರಾಗಿದ್ದಾರೆ. kulkarnichalukya@gmail.com

ಆರ್.ಎಚ್‌.ಕುಲಕರ್ಣಿ