ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹರಿಹರೇಶ್ವರರು (ಹುಟ್ಟಿದ್ದು) ಶಿಕಾರಿಪುರ -ಮನೆತನದ ಹೆಸರು. ತಂದೆ ಕೃಷ್ಣಸ್ವಾಮಿರಾವ್, ತಾಯಿ ಅನ್ನಪೂರ್ಣಮ್ಮ. ದಾವಣಗೆರೆಯ ಬಿಡಿಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಬಿಇ ಶಿಕ್ಷಣ, ಸುರತ್ಕಲ್‌ನ ಕರ್ನಾಟಕ ರೀಜನಲ್ ಎಂಜನಿಯರಿಂಗ್ ಕಾಲೇಜಿನಲ್ಲಿ ಎಂ.ಟೆಕ್.ಪೂರ್ಣಗೊಳಿಸಿ, ಅಮೆರಿಕದ ಓಕ್ಲ ಹೋಮ ವಿಶ್ವವಿದ್ಯಾಲಯದಿಂದ ಎಂ.ಎಸ್. ಪದವಿ ಪಡೆದರು. ಕೆಲ ಕಾಲ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಬೋಧನೆ, ನಂತರ, ಓಕ್ಲಹೋಮದಲ್ಲಿ ಎಂ.ಎಸ್. ಪದವಿ ಓದುತ್ತಿರುವಾಗಲೇ ಓಕ್ಲ ಹೋಮ ಸ್ಟೇಟ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾ ರಾಜ್ಯದ ಕಮ್ಯುನಿಟಿ ಕಾಲೇಜು ಮತ್ತು ಕ್ಯಾಲಿಫೋರ್ನಿಯಾ ಪೆಸಿಫಿಕ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಟೆಹರಾನ್, ಇರಾನ್‌ನಲ್ಲಿ ಸ್ಟ್ರಕ್ಚರಲ್ ಎಂಜನಿಯರಾಗಿ ಕನ್ಸಲ್ಟೆಂಟ್ ಎಂಜನಿಯರಾಗಿದ್ದರು. ಅಮೆರಿಕಾದ ಪೆನ್ಸಿಲ್ವೇನಿಯಾ ಮತ್ತು ನ್ಯೂಜೆರ್ಸಿ ರಾಜ್ಯಗಳ ಅಣುಶಕ್ತಿ ಸ್ಥಾವರಗಳಲ್ಲಿ ಸ್ಟ್ರಕ್ಚುರಲ್ ಎಂಜನಿಯರಾಗಿ, ಕ್ಯಾಲಿಫೋರ್ನಿಯಾ, ಡೆಲ್‌ವೇರ್ ರಾಜ್ಯಗಳಲ್ಲಿ ಪ್ರೊಫೆಷನಲ್ ಎಂಜನಿಯರಾಗಿದ್ದರು.
ವಿದೇಶದಲ್ಲಿದ್ದರೂ ಕನ್ನಡ ಮರೆಯಲಿಲ್ಲ. ‘ಅಮೆರಿಕನ್ನಡ’ ದ್ವೈಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕ, ಪ್ರಕಾಶಕರಾಗಿದ್ದರು. ಟೆಕ್ಸಾಸ್, ಹೂಸ್ಟನ್ ವಿಶ್ವಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ ಸಂಪಾದಕತ್ವ. ಚಿತ್ರಭಾನು, ತ್ರಿವೇಣಿ ವಾಹಿನಿ, ಪೆನ್ಸಿಲ್‌ವೇನಿಯಾ ರಾಜ್ಯದ ಮಾಸಿಕ ವಾರ್ತಾಪತ್ರ ; ತ್ರಿವೇಣಿ-ಪ್ರಥಮ ಉತ್ತರ ಅಮೆರಿಕ ಸ್ಮರಣ ಸಂಚಿಕೆ, ತುರಾಯಿ ಮಿಸ್ಸೌರಿ ಕನ್ನಡ ಸಂಘದ ಸ್ಮರಣ ಸಂಚಿಕೆ ; ಸ್ಪಂದನ-ಡೆಟ್ರಾಯಿಟ್ ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ; ಸಂಗಮ-ಲಾಸ್ ಏಂಜಲೀಸ್ ಕನ್ನಡ ಸಂಘದ ಸ್ಮರಣ ಸಂಚಿಕೆ ಸಂಪಾದಕತ್ವದ ಹೊಣೆ. ಹೊತ್ತಿದ್ದರು. ಕನ್ನಡ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದರು. ಮಾತಿನ ಮಂಟಪ (ಪ್ರಬಂಧ ಸಂಕಲನ) ರಾಂಟಿಜನ್ (ವೈಜ್ಞಾನಿಕ ಸಾಹಿತ್ಯ), ಕನ್ನಡ ಉಳಿಸಿ ಬೆಳಸುವ ಬಗೆ, ಮಾತಿನ ಚಪ್ಪರಇವರ ಕೃತಿಗಳು. ಅವರು 22-07-2010 ರಂದು ನಿಧನರಾದರು.