About the Author

ಎಸ್. ಕಾರ್ತಿಕ್ ಬೆಂಗಳೂರಿನವರು. ತಂದೆ ಕೆ. ಸತ್ಯನಾರಾಯಣ, ತಾಯಿ ಕೆ.ಎಸ್. ಕಾಂತಮ್ಮ.  ಸಂಶೋಧನೆಯ ವಿಷಯಗಳು: ವ್ಯಾಕರಣ, ಛಂದಸ್ಸು, ಅಲಂಕಾರ, ನಿಘಂಟು, ಜ್ಯೌತಿಷ, ಸಂಗೀತ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ, ಪುರಾತತ್ತ್ವ, ಹಸ್ತಪ್ರತಿಶಾಸ್ತ್ರ, ಭಾಷಾಶಾಸ್ತ್ರ, ಭಾರತೀಯ ಕಾಲಗಣನೆ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತರು. ಕನ್ನಡ, ಸಂಸ್ಕೃತ, ತೆಲುಗು, ಹಿಂದಿ ಭಾಷಾ ಪರಿಣಿತರು.

ಕೃತಿಗಳು : ಪದಾರ್ಥ ಸಂಪದ, ಕೆಲವು ಕನ್ನಡ ನಿಘಂಟುಗಳು, ಸಂಶೋಧನ ಸಂಭಾನೆ, ಸಂಗೀತಶಾಸ್ತ್ರ ಚಂದ್ರಿಕೆ. ಸುಮಾರು 150ಕ್ಕೂ ಹೆಚ್ಚು ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ, ಅಭಿನಂದನಗ್ರಂಥಗಳಲ್ಲಿ ಪ್ರಕಟವಾಗಿವೆ.

ಅರಳು ಸಾಹಿತ್ಯ ದತ್ತಿ ಪ್ರಶಸ್ತಿ, ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ‘ಕಾರ್ಯ ಶಿಬಿರ’ಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ್ದಾರೆ. ಭಾರತ ಸರ್ಕಾರದ ಪುರಾತತ್ತ್ವ ಇಲಾಖೆ ವತಿಯಿಂದ ನಡೆದ ಉತ್ಖನನದಲ್ಲೂ ಭಾಗವಹಿಸಿದ್ದಾರೆ.

ಎಸ್. ಕಾರ್ತಿಕ್

(27 Feb 1985)