About the Author

ಹಸ್ತಪ್ರತಿಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಎಸ್ ಆರ್ ಚನ್ನವೀರಪ್ಪ ಅವರು ೧೯೭೧ ಎಪ್ರಿಲ್ ೧ ರಂದು ಜನಿಸಿದರು. ಎಂ, ಎ , ಪಿಎಚ್ ಡಿ ಪದವೀಧರರಾದ ಅವರು ಹಸ್ತ ಪ್ರತಿಶಾಸ್ತ್ರ,ಗ್ರಂಥ ಸಂಪಾದನೆ, ಮಧ್ಯಕಾಲೀನ ಕನ್ನಡ ಸಾಹಿತ್ಯ, ಮುಂತಾದ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ ಮತ್ತು ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನೆ, ಪ್ರಾಚೀನ ಕನ್ನಡ ಸಾಹಿತ್ಯ, ಮಧ್ಯಕಾಲೀನ ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ ಇತ್ಯಾದಿ ಅವರ ಪ್ರಮುಖ ಅಧ್ಯಯನದ ಆಸಕ್ತಿಯ ಕ್ಷೇತ್ರಗಳಾಗಿವೆ.ನಾಗಲಿಂಗಸ್ವಾಮಿ ತತ್ವಪದಗಳು, ಸ್ವರಚನೆ ತರಂಗ-೧, ದಾಸರಾಯರ ಪದಗಳು, ಕೃತಿ ಪ್ರವೇಶ,ಅವರ ಪ್ರಮುಖ ಪ್ರಕಟಗೊಂಡ ಕೃತಿಗಳಾಗಿವೆ.ಗಾಣದ ಕಲೆ , ದೇಸಿ ಸಾಹಿತ್ಯ ಸಂಪಾದನೆ, ಬಿಜಾಪುರ ಜಿಲ್ಲೆಯ ಹಸ್ತಪ್ರತಿ ಸಂಪತ್ತು, ಎಂ,ಬಿ ನೇಗಿಹಾಳ, ಡಾ.ಎಚ್ ತಿಪ್ಪೇರುದ್ರ ಸ್ವಾಮಿ ಇತ್ಯಾದಿ ಅವರ ಹತ್ತು ಪ್ರಮುಖ ಸಂಶೋಧನ ಲೇಖನಗಳಾಗಿವೆ.ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿಯೂ , ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಘಟಕದ ಸಂಯೋಜನಾಧಿಕಾರಿಯೂ, ಪ್ರಸಾರಾಂಗದ, ಅಂತರಿಕ ಸಲಹಾ ಸಮಿತಿ ಸದಸ್ಯರು , ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲಸಂಗಮದ ಮುಖ್ಯಸ್ಥರಾಗಿಯೂ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಎಸ್. ಆರ್. ಚನ್ನವೀರಪ್ಪ