About the Author

ಎಸ್.ಆರ್.ಗುಂಜಾಳ ಅವರು ಧಾರವಾಡ ಜಿಲ್ಲೆಯ ಕೋಳಿವಾಡದಲ್ಲಿ ಜನಿಸಿದರು. ತಂದೆ ರಾಯಪ್ಪ ಗುಂಜಾಳ, ತಾಯಿ ರುದ್ರಮ್ಮ.

ಸ್ನಾತಕೋತ್ತರ ಪದವೀಧರರಾದ ಅವರು `ಉತ್ತಂಗಿ ಚನ್ನಪ್ಪನವರ ಜೀವನ ಮತ್ತು ಕೃತಿಗಳು : ಒಂದು ಅಧ್ಯಯನ' ಪ್ರಬಂಧ ಮಂಡಿಸಿ ಬಂಗಾರದ ಪದಕದೊಡನೆ ಪಿಎಚ್.ಡಿ. ಪದವಿಯನ್ನೂ ಗಳಿಸಿದ್ದಾರೆ.

ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1979ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ಹೊತ್ತರು.

ಗ್ರಂಥಾಲಯಕ್ಕೆ ಸಂಬಂಧಿಸಿದಂತೆ-ಐವರು ಗ್ರಂಥಾಲಯ ವಿಜ್ಞಾನಿಗಳು, ಗ್ರಂಥಾಲಯು ವಿಜ್ಞಾನ ದರ್ಶನ, ಕರ್ನಾಟಕದಲ್ಲಿ ಗ್ರಂಥಾಲಯಗಳು, ಗ್ರಂಥಾಲಯ ದಿಗ್ಗಜರು, ಗ್ರಂಥಾಲಯ ವಿಜ್ಞಾನದ ಪಂಚಸೂತ್ರಗಳು, ಗ್ರಂಥಾಲಯದ ಅಂತರಂಗ, ಇಂಗ್ಲಿಷ್‌ನ 3ಕೃತಿ ಸೇರಿ 16 ಕೃತಿಗಳನ್ನು ಹೊರ ತಂದಿದ್ದಾರೆ. 

ಕಾಯಕಯೋಗಿ ಬಸವನಾಳ ಶಿವಲಿಂಗಪ್ಪನವರು, ಬಿ.ಡಿ. ಜತ್ತಿ ಬಾಳು-ಬದುಕು, ಎಚ್.ಎಫ್. ಕಟ್ಟೀಮನಿಯವರು, ಉತ್ತಂಗಿ ಚನ್ನಪ್ಪ, ಯಗಟಿ ವೀರಪ್ಪ ಅವರ ಪ್ರಮುಖ ಕೃತಿಗಳು.

ಧಾರ್ಮಿಕ ಗ್ರಂಥಗಳು-ಅನುಭಾವಿಯ ಆತ್ಮಕಥನ, ಬಸವ ಚಿಂತನ, ಮಹಾಕವಿದ್ವಯರು, ವಚನಕಾರರು ಮತ್ತು ವಚನಾಂಕಿತರು, ಸುಖೀಜೀವನದ ಸೂತ್ರಗಳು, ಹಲವು ಸಂಪಾದಿತ, ಅನುವಾದಿತ ಮರಾಠಿ, ಇಂಗ್ಲಿಷ್ ಕೃತಿ ಸೇರಿದಂತೆ 75ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ದೇವರಾಜ ಬಹದ್ದೂರ್ ಪ್ರಶಸ್ತಿ, ತಪಶೆಟ್ಟಿ ಬಹುಮಾನ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

ಎಸ್.ಆರ್. ಗುಂಜಾಳ