About the Author

ಸಂತೋಷ್ ಕುಮಾರ್ ಗುಲ್ವಾಡಿ ಅವರು ಮೂಲತಃ (ಜನನ:02-10-1938) ಉಡುಪಿಯವರು. ತಂದೆ- ರತ್ನಾಕರ ಭಟ್ ಹಿಂದೂಸ್ಥಾನಿ ಸಂಗೀತಗಾರರು. ಸಂಗೀತ ಕಲಿಸುತ್ತಿದ್ದರು. ಜೊತೆಗೆ ಬುಕ್ ಬೈಂಡಿಂಗ್, ಸಂಗೀತ ವಾದ್ಯಗಳ ತಯಾರಿ, ನಾಟಕದ ಪರದೆಗಳನ್ನು ಬರೆಯುವುದು, ರಂಗಮಂದಿರ ನಿರ್ಮಾಣ, ಮೇಕಪ್ ಸೇರಿದಂತೆ ಹಲವು ಕಲೆಗಳಲ್ಲಿ ಪರಿಣಿತರಾಗಿದ್ದರು. ಸಂತೋ಼ಕುಕಮಾರ ಗುಲ್ವಾಡಿ ಅವರು ಮೈಸೂರು ವಿವಿಯಿಂದ ಬಿಕಾಂ ಪದವೀಧರರು. ಮುಂಬೈ ವಿವಿಯಿಂದ ಕಾನೂನು ಪದವೀಧರರು. ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಡಿಪ್ಲೊಮಾ ಪಡೆದರು. 

ನವಭಾರತ ಪತ್ರಿಕೆ ಸೇರಿದ ಅವರು ವ್ಯಂಗ್ಯ ಚಿತ್ರಕಾರರೂ ಹೌದು. ’ಸಿಂಗರ್ ಕಂಪೆನಿ’ಯಲ್ಲಿ ಸ್ವಲ್ಪದಿನ ಕೆಲಸ ಮಾಡಿದರು. ಮುಂಬೈನಲ್ಲಿ ಪತ್ರಿಕೋದ್ಯಮ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ಫ್ರಿಲ್ಯಾನ್ಸರ್ಆ ಹಾಗೂ ಕೆಲಕಾಲ ಪ್ರಜಾವಾಣಿ ಮತ್ತು ಸುಧಾ ಪತ್ರಿಕೆಗಳಿಗೂ ಅರೆಕಾಲಿಕ ವರದಿಗಾರರಾಗಿದ್ದರು. 1982ರಿಂದ 1999 ರವರೆಗೂ ತರಂಗ ವಾರಪತ್ರಿಕೆ ಹಾಗೂ ಕೆಲಕಾಲ ನೂತನ ಪತ್ರಿಕೆಗೂ ಸಂಪಾದಕರಾಗಿದ್ದರು. ಅವರು ಬರೆಯುತ್ತಿದ್ದ ಅಂಕಣ ಬರೆಹ  'ಅಂತರಂಗ ಬಹಿರಂಗ' ಕೃತಿ ಪ್ರಕಟವಾಯಿತು. ಕೇಂದ್ರಸಂಗೀತ ನಾಟಕ ಅಕಾಡೆಮಿಗಾಗಿ 'ಬಸರೂರು ದೇವದಾಸಿಯರು' ಎಂಬ ಸಾಕ್ಷ್ಯ ಚಿತ್ರ, 1965ರಲ್ಲಿ 'ಹೃದಯದ ಶಸ್ತ್ರಚಿಕಿತ್ಸೆ'ಗೆ ಒಳಗಾಗಿದ್ದ ತಮ್ಮ ಅನುಭವವನ್ನು 'ನಾನು ಹೃದಯ ಚಿಕಿತ್ಸೆ ಮಾಡಿಸಿಕೊಂಡೆ' ಎಂಬ ಕೃತಿಯಾಗಿಸಿದರು.

‘ಮೊದಲ ಮೊಗ್ಗು’, ಗಂಜೀಫ ಕಲೆ, ಮಹಾ ಪತ್ರಿಕಾಕರ್ತ ಮಹಾತ್ಮ ಗಾಂಧಿಯವರು, ಅಂತರಂಗ ಬಹಿರಂಗ, ಕೊಂಕಣಿ ಮಕ್ಕಳ ಹಾಡುಗಳ ಸಂಕಲನ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'. 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ', 'ಆಳ್ವಾಸ್ ನುಡಿಸಿರಿ ಪ್ರಶಸ್ತಿ', ವಿಶ್ವೇಶ್ವರಯ್ಯ ಪ್ರಶಸ್ತಿ, ವೀರ ಸಾವರ್ಕರ್ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಪ್ರಶಸ್ತಿ ಸಂದಿವೆ. ಅವರು 2010 ಡಿಸೆಂಬರ್ 7ರಂದು ನಿಧನರಾದರು.

 

ಸಂತೋಷಕುಮಾರ ಗುಲ್ವಾಡಿ

(02 Oct 1938-07 Dec 2010)

ABOUT THE AUTHOR