About the Author

ಸರಸ್ವತಿ ಭೋಸಲೆಯವರು ಮೂಲತ: ಗದಗ ಜಿಲ್ಲೆಯ ಶಿರಹಟ್ಟಿಯವರು.  ರಾಜ್ಯ ಸರ್ಕಾರದ ರೇಷ್ಮೆ ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ, 2007 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕಾರೀ ಸಮಿತಿಯ ಸದಸ್ಯರಾಗಿ 4 ವರುಷಗಳವರೆಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 2 ವರ್ಷಗಳವರೆಗೆ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಲೇಖಿಕಾ ಸಾಹಿತ್ಯ ವೇದಿಕೆಯ ಸದಸ್ಯರಾಗಿ,ಈ ವೇದಿಕೆಯಿಂದ ಹಿರಿಯ ಮಹಿಳಾ ಚೇತನಗಳ ಬದುಕು ಬರಹ ಮಾಲಿಕೆಯಲ್ಲಿ ಎರಡು ಸಲ ಪ್ರಬಂಧ ಮಂಡನೆಯನ್ನು ಮಾಡಿರುವರು.

ಸ್ವರಚಿತ ಕಥಾವಾಚನ ಕಾವ್ಯವಾಚನ ಹೀಗೆ ಅನೇಕ ಸಾಹಿತ್ಯ ಚಟುವಟಿಕೆಗಳಲ್ಲಿ ಈ ವೇದಿಕೆಯಿಂದ ಭಾಗವಹಿಸಿರುವರು. ಇತ್ತೀಚಿಗೆ,ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ತಾಲೂಕಾ ಘಟಕದ ಪದಾಧಿಕಾರಿಯಾಗಿಯೂ ಅಯ್ಕೆಯಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುತ್ತಿರುವ ಧಾರವಾಡದ ಖ್ಯಾತ ಸಂಸ್ಥೆಯಾದ 'ವಿದ್ಯಾ ಪೋಷಕ' ದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಸ್ವಯಂಸೇವಕಿಯಾಗಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿರುವರು.

ಧಾರವಾಡದ ರಾಮನಗರದ ಭಾರತೀಯ ಶಿಕ್ಷಣ ಪ್ರಸಾರ ಸಮಿತಿಯಲ್ಲಿಯೂ ಕಳೆದೆರಡು ವರ್ಷಗಳಿಂದ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸಿದ್ದಾರೆ ಕರ್ನಾಟಕ ವಿದ್ಯಾವರ್ಧಕ ಸಂಘ,ನವಿಲುಗರಿ ಸಾಹಿತ್ಯವೇದಿಕೆ,ಜಾನಪದ ಸಂಶೋಧನಾ ಕೇಂದ್ರ,ಗಣಕರಂಗ ಮೊದಲಾದ ಸಂಘ ಸಂಸ್ಥೆಗಳ ಸಕ್ರಿಯ ಸದಸ್ಯರಾಗಿ,ಕಥೆ.ಕವನ,ಪ್ರಬಂಧ,ನಾಟಕ ಮೊದಲಾದ ಸಾಹಿತ್ಯ ಪ್ರಕಾರದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. 2021 ರಲ್ಲಿ ಪರಿಸರ ಅಭಿಯಾನ ಸಮಿತಿ ಧಾರವಾಡ ಮತ್ತು ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಏರ್ಪಡಿಸಿದ ರಾಜ್ಯಮಟ್ಟದ "ಕೊರೋನಾ" ಸಾಂಕ್ರಾಮಿಕ ರೋಗ ಕುರಿತ ಕಿರುನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುವರು. ಕಸ್ತೂರಿ,ಪ್ರಜಾವಾಣಿ,ಮರಾಠಾ ಪತ್ರಿಕೆ,'ಸ್ತ್ರೀ ಜಾಗ್ರತಿ, ' ಪ್ರಾಫಿಟ್ ಪ್ಲಸ್','ಸಮಾಜ ಮುಖಿ' 'ವಿಭೂತಿ', 'ಕೃಷಿ ಕಾಮಧೇನು' ಮೊದಲಾದ ಪತ್ರಿಕೆಗಳಲ್ಲಿ ಇವರ ಕಥೆ/ಕವನ/ಲೇಖನ/ಪ್ರಬಂಧಗಳು ಪ್ರಕಟಗೊಂಡಿವೆ.

ಕೃತಿಗಳು: ಸಾಗರದಾಚೆಯ ಸಾಕ್ಷಾತ್ಕಾರ,' ನಾ ಕಂಡ ಮಿನಿ ಯುರೋಪ','ಕಲಾ ಸಂಭ್ರಮ' ಹೀಗೆ ಮೂರು ಪ್ರವಾಸ ಕಥನಗಳು,' 'ತಪಸ್ವಿನಿ', ' ತೊಗಲು ತತ್ತಿ' ಎರಡು ಕಥಾ ಸಂಕಲನಗಳು,' ಜೀವನ ಅನುಸಂಧಾನ' ಚಿಂತನಪರ ಲೇಖನಗಳ ಸಂಗ್ರಹ, 'ಜ್ಞೇಯ' ವಾರದ ಓದಿನ ಲೇಖನಗಳ ಸಂಗ್ರಹ,' ಹೆಜ್ಜೆ' ಕವನ ಸಂಕಲನ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಒಟ್ಟು ಎಂಟು ಪುಸ್ತಕಗಳನ್ನು ಪ್ರಕಟಿಸಿರುವರು. ' ಮನದಲ್ಲಿ ಮನೆ ಮಾಡಿದವರು' ವ್ಯಕ್ತಿಚಿತ್ರಗಳು ಮತ್ತು "ಬೀಸು ಬಿರುಗಾಳಿ"

ಸರಸ್ವತಿ ಭೋಸಲೆ