About the Author

ಲೇಖಕಿ ಶೈಲಾ ನಾಗರಾಜ್ ಬಿ. ಸಿ. ಅವರು ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಬೊಮ್ಮಗೌಡನ ಪಾಳ್ಯದವರು. 1965 ಮೇ 08 ರಂದು ಜನಿಸಿದರು. ತಂದೆ - ಬಿ. ಚನ್ನಪ್ಪ, ತಾಯಿ - ಗೌರಮ್ಮ. ಸುಮಾರು 30 ವರ್ಷಗಳಿಂದ ಸಾಹಿತ್ಯ ರಚನೆ, ಜನಪರ ಸಂಘಟನೆ, ಪ್ರಗತಿಪರ, ಮಹಿಳಾ ಪರ ಹೋರಾಟಗಳಲ್ಲಿ ತೊಡಗಿಕೊಂಡು ಜನಮುಖಿ ಲೇಖಕಿಯೆಂದೇ ಪ್ರಸಿದ್ದರಾಗಿದ್ದಾರೆ. ಮಹಿಳಾ ಸಂಸ್ಕೃತಿ ಕುರಿತು ವಿಶೇಷ ಅಧ್ಯಯನ ಮಾಡಿ ಪಿ.ಹೆಚ್. ಡಿ ಪದವಿಗಳಿಸಿದ್ದಾರೆ. 20 ವರ್ಷಗಳಿಂದ ಹೊರತರುತ್ತಿರುವ ಕನ್ನಡ ಸಾಹಿತ್ಯ ಪತ್ರಿಕಾ ಲೋಕದಲ್ಲಿ ವಿಶೇಷ ಸ್ಥಾನಗಳಿಸಿರುವ ಶೈನಾ ಎಂಬ ಅಪೂರ್ವ ಕೈಬರಹದ ರೂವಾರಿಯಾಗಿದ್ದಾರೆ. ಕರ್ನಾಟಕ  ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯಲ್ಲಿ 10 ವರ್ಷಗಳ ಕಾಲ ಅಧ್ಯಕ್ಷೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಗ್ರಾಮಾಂತರ ಮಟ್ಟಕ್ಕೆ ಸಂಘವನ್ನು ವಿಸ್ತರಿಸುತ್ತಾರೆ. 

ಕೃತಿಗಳು: ಕನಸುಗಳ ದಾಟಿದವರು, ಮಾನವಿ, ಬಯಲು ಮತ್ತು ಏಕಾಂತ (ಕವನ ಸಂಕಲಗಳು), ಮಾರ್ಟಿನ್ ಲೂಥರ್ ಕಿಂಗ್, ಡಾ. ನಿರುಪಮಾ (ಜೀವನ ಚರಿತ್ರೆ), ಸಿದ್ದರಾಮನ ಕಾಯಕ ತತ್ವ, ಅಲ್ಲಮ, ಮಹಿಳಾ ಅಧ್ಯಯನ, ‘ಗ್ರಾಮೀಣ ಮಹಿಳಾ ಲೋಕ, ಅಕ್ಕಮಹಾದೇವಿ ಮತ್ತು ಸ್ತ್ರೀವಾದ, ‘ಮಹಿಳಾ ನಾಯಕತ್ವ ಮತ್ತು ಸಂಘಟನೆಯ ಸವಾಲುಗಳು ಲೇಖನಗಳ ಸಂಗ್ರಹ ಕೃತಿಗಳನ್ನು ರಚಿಸಿದ್ದಾರೆ. ಕಾವ್ಯ ಧ್ವನಿಗಳು, ಸಮಾನತೆ, ಹಚ್ಚೇವು ಕನ್ನಡದ ದೀಪ ಅವರ ಸಂಪಾದಿತ ಕೃತಿಗಳು.

ಪ್ರಶಸ್ತಿ-ಗೌರವಗಳು: ಜಿಲ್ಲಾ ಮಟ್ಟದ ‘ಸಾಹಿತ್ಯ ಚಂದನ ಪ್ರಶಸ್ತಿ, ರಾಜ್ಯಮಟ್ಟದ ‘ಅಮ್ಮ’ ಕಾವ್ಯ ಪ್ರಶಸ್ತಿ, ‘ಜನಮುಖಿ' ಮಹಿಳಾ ಸೇವಾ ಪ್ರಶಸ್ತಿ, ಉತ್ತಮ ಮಹಿಳಾ ಸಂಘಟಕಿ ಪ್ರಶಸ್ತಿ, ಮಹಿಳಾ ನೇತ್ರಿ ಪ್ರಶಸ್ತಿ, ಕನ್ನಡ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, ಇಂದಿರಾರತ್ನ ಪ್ರಶಸ್ತಿ, ರಾಜ್ಯ ಸಣ್ಣ ಪತ್ರಿಕೆಗಳ ಸಂಘದ ಪ್ರಶಸ್ತಿ ಹೀಗೆ ವಿವಿಧ ಗೌರವ -ಪ್ರಶಸ್ತಿಗಳು ಸಂದಿವೆ.

 

ಶೈಲಾ ನಾಗರಾಜ್

(08 May 1965)