About the Author

ಲೇಖಕಿ ಶಾಂತಾದೇವಿ ಮಾಳವಾಡ ಅವರ ಹುಟ್ಟೂರು ಬೆಳಗಾವಿ. ತಂದೆ ಮುರಿಗೆಪ್ಪಶೆಟ್ಟಿ, ತಾಯಿ ಜಯವಂತಿದೇವಿ. ಹಿರಿಯ ಲೇಖಕ ಡಾ. ಸ.ಸ. ಮಾಳವಾಡರ ಪತ್ನಿ. ಗೃಹಿಣಿಯಾಗಿ‌ದ್ದ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1978) ಜ.ಚ.ನಿ. ಬೆಳ್ಳಿಹಬ್ಬ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಬಾಗಲಕೋಟೆಯಲ್ಲಿ (1999) ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ಗಿದರು. ಕನ್ನಡ ಸಾಹಿತ್ಯ ಪರಿಷತ್ತು 'ಗೌರವ ಸದಸ್ಯತ್ವ' ನೀಡಿ ಸನ್ಮಾನಿಸಿದೆ.

ಕನ್ನಡ ತಾಯಿ, ಕೆಳದಿ ಚೆನ್ನಮ್ಮ (ಜೀವನ ಚರಿತ್ರೆ), ಸಮುಚ್ಚಯ. ವಧುವಿಗೆ ಉಡುಗೊರೆ (ಪ್ರಬಂಧ), ಮೊಗ್ಗೆಯ ಮಾಲೆ (ಕಥಾಸಂಕಲನ), ಸೊಬಗಿನ ಮನೆ (ಗೃಹಾಲಂಕಾರ), ಶ್ರೀ ಗಿರಿಯಿಂದ ಹಿಮಗಿರಿಗೆ (ಪ್ರವಾಸ ಸಾಹಿತ್ಯ), ಮಹಿಳಾ ಚೇತನ (ಪ್ರಬಂಧ ಸಂಕಲನ) ಇತರೆ: ಸಾರ್ವಜನಿಕ ರಂಗದಲ್ಲಿ ಮಹಿಳೆ, ಪುರಾತನ ಶಿವಶರಣರು, ಹರಿಹರನ ಪ್ರಾರ್ಥನೆಗಳು, ದಾಂಪತ್ಯ ಯೋಗ ಅವರ ಪ್ರಕಟಿತ ಕೃತಿಗಳು.

ಶಾಂತಾದೇವಿ ಮಾಳವಾಡ

(10 Dec 1922-07 Aug 2005)