About the Author

ಲೇಖಕಿ ಡಾ. ಶರಣಮ್ಮ ಪಾಟೀಲ ಅವರು ಮೂಲತಃ ಕಲಬುರಗಿಯವರು. ತಂದೆ ಬಸವಂತರಾವ್ ಗೌಡ .ತಾಯಿ ಸುಭದ್ರಬಾಯಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಲೇಖಕಿ ತಾಯಿಯ ತವರೂರು ಚಿತ್ತಾಪುರ ತಾಲೂಕಿನ ಕುಂದಗೂಳ ಹಾಗೂ ರಟಗಲ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ , ಸೇಡಂ ನಲ್ಲಿ ಪ್ರೌಢಶಿಕ್ಷಣ, ಕಲಬುರಗಿಯಲ್ಲಿ ಹತ್ತನೇ ತರಗತಿ ಶಿಕ್ಷಣ, ಪೂರೈಸಿದರು.  ಶರಣಬಸವೇಶ್ವರ ಸಂಸ್ಥಾನದ ಶ್ರೀ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಪದವಿ ಶಿಕ್ಷಣ, ಮುಂದೆ ಗುಲಬರ್ಗಾ ವಿ.ವಿ.ಯಿಂದ ಕನ್ನಡ ವಿಭಾಗದಲ್ಲಿ ಎಂ.ಎ.ಪದವಿ ಪಡೆದರು. ‘ಶೂನ್ಯ ಸಂಪಾದನೆಗಳಲ್ಲಿ ಸ್ತ್ರೀ ಪ್ರಸಂಗಗಳು’ ವಿಷಯವಾಗಿ ಎಂ.ಫಿಲ್ ಹಾಗೂ  "ಶೂನ್ಯ ಸಂಪಾದನೆ ಹಾಗೂ ವೀರಶೈವ ಕಾವ್ಯಗಳಲ್ಲಿ ಸ್ತೀ ಪ್ರಸಂಗಗಳ ಒಂದು ತೌಲನಿಕ ಅಧ್ಯಯನ"" ವಿಷಯವಾಗಿ ಪಿ.ಎಚ್ ಡಿ ಪಡೆದರು. ಶಹಾಬಾದಿನ ಶರಣಬಸವೇಶ್ವರ ವಿದ್ಯಪೀಠದ ಮಹಾವಿದ್ಯಾಲಯ, ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ,  ಸದ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೀಗೆ ಒಟ್ಟು 22 ವರ್ಷಗಳ ಸುದೀರ್ಘ ಬೋಧನಾ ಅನುಭವವಿದೆ. ಈ ಮಧ್ಯೆ, ಕಲಬುರಗಿ  ಜಿಲ್ಲೆಯ  ಅವರಾದ (ಬಿ).ಗ್ರಾಮದಲ್ಲಿ ಹಳ್ಳಿಮಕ್ಯಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮಹಾತ್ವಾಕಾಂಕ್ಷೆ ಯಿಂದ  ‘ನೀವೇದಿತಾ ಶಿಕ್ಷಣ ಸಂಸ್ಥೆ’ ಸ್ಥಾಪಿಸಿ (2010) ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. 

ಕೃತಿಗಳು: ಶೂನ್ಯ ಸಂಪಾದನೆ ಗಳಲ್ಲಿ ಶಿವಶರಣಿಯರು (2019) , ಭೂಗರ್ಭ (ಕಾದಂಬರಿ- 2020), ಅನೇಕ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ಸುಮಾರು 50 ಕ್ಕೂ ಹೆಚ್ಚು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 

ಪ್ರಶಸ್ತಿ-ಪುರಸ್ಕಾರಗಳು: ವಚನ ಸಾಹಿತ್ಯದಲ್ಲಿ  National Level young scientist award ಹಾಗೂ ಭೂಗರ್ಭ ಕಾದಂಬರಿಗೆ (2021) ಕಲ್ಯಾಣ ರತ್ನ ಶ್ರೀ ಪ್ರಶಸ್ತಿ ದೊರಕಿದೆ.

ಶರಣಮ್ಮ ಪಾಟೀಲ