About the Author

ಕನ್ನಡ, ತುಳು ಸಾಹಿತಿ ಸಿಮಂತೂರು ಚಂದ್ರಹಾಸ ಸುವರ್ಣ ಅವರು ಮುಂಬಯಿಯ  ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಮುಂಬಯಿಯಲ್ಲಿ ನಾಟಕಕಾರ, ನಿರ್ದೇಶಕ, ಸಾಹಿತಿ ಎಂದು ಗುರುತಿಸಲಾಗುವ ಅವರಿಗೆ ಅನೇಕ ಪ್ರಶಸ್ತಿಗಳು ದೊರೆತಿವೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಶಿಮಂತೂರು ಗ್ರಾಮದ ಚಂದ್ರಹಾಸ ಸುವರ್ಣ ಅವರು ಉದ್ಯೋಗ ನಿಮಿತ್ತ ಮುಂಬಯಿಯಲ್ಲಿ ನೆಲೆಸಿ, ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.ಸುರತ್ಕಲ್ ಗೋವಿಂದಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಬೆಂಗಳೂರಿನ ಕರ್ನಾಟಕ ಹೊಮಿಯೋಫಥಿ ಕಾಲೇಜಿನಲ್ಲಿ ವೈದ್ಯ ಪದವಿಯನ್ನು ಪಡೆದಿರುತ್ತಾರೆ.

ಉಡುಪಿ ತುಳುಕೂಟ ತುಳು ಕಥಾ ಪ್ರಶಸ್ತಿ, ಮುಂಬಯಿ ಅಕ್ಷಯ ಮಾಸಪತ್ರಿಕೆ ಸಾಹಿತ್ಯ ಪ್ರಶಸ್ತಿ, ಬೆಹರಿನ್ ಕಾಂಚನ ಫೌಂಡೇಶನ್ ಪ್ರಶಸ್ತಿ ಪಡೆದಿರುವ ಸುವರ್ಣರು ಮುಂಬಯಿ ಪೊವಾಯಿ ಕನ್ನಡ ಸೇವಾ ಸಂಘದ ಕನ್ನಡ ಜ್ಯೋತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುವರ್ಣರ ಕೊರಲ್ ಮತ್ತು ಗಾಲ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಗೌರವ ಪ್ರಶಸ್ತಿಯೂ ಲಭಿಸಿದೆ. ಸಿಮಂತೂರು ಚಂದ್ರಹಾಸ ಸುವರ್ಣ ಅವರ ಮಣ್ಣ್‍ದ ಮದಿಪು ಕಾದಂಬರಿ ತುಳುಮಣ್ಣಿನ ಅಪ್ಪಟ ತುಳು ಸೊಗಡಿನ ನವಿರಾದ ಕಥೆಯನ್ನೊಳಗೊಂಡ ಅಪರೂಪದ ಕಾದಂಬರಿ.

ಶಿಮಂತೂರು ಚಂದ್ರಹಾಸ ಸುವರ್ಣ