About the Author

ಶಿವಾನಂದ ಜೋಶಿ ಮೂಲತಃ ಬಾಗಲಕೋಟೆ ಜಿಲ್ಲೆಯ ಕೆರೂರು ಗ್ರಾಮದವರು. (ಜನನ: 29-10-1937) ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಅವರು ಕ್ರೀಡಾಂಕಣಕ್ಕೆ ಬರೆಯುತ್ತಿದ್ದ ‘ಚಾರ್ ರನ್ ಕೆ. ಲಿಯೆ’ ಎಂಬ ಆಂಕಣ ಪ್ರಸಿದ್ಧಿ ಪಡೆದಿತ್ತು. ಇವರ ಕಾರ್ಯಕ್ಷೇತ್ರ ಮಾತ್ರ ಹುಬ್ಬಳ್ಳಿಯೇ ಆಗಿತ್ತು.

ಪಾಪು-ಪಾವೆಂ: ಒಂದು ತೌಲನಿಕ ಅಧ್ಯಯನ, ಪತ್ರಿಕೋದ್ಯಮ ಒಂದು ಮಾರ್ಗದರ್ಶಿ, ಓಲಂಪಿಕ್ ಆಂದೋಲನ, ಕ್ರಿಕೆಟ್ ಕಥೆ, ವಿಜಯ ದುಂದುಭಿ, ಶಿರಡಿ ಸಾಯಿ ಸಚ್ಚರಿತ್ರೆ, ಸ್ತ್ರೀ ಚರಿತ್ರೆ, ಪುರುಷ ಭಾಗ್ಯ, ಇತಿಹಾಸದ ಹಾದಿಯಲ್ಲಿ ಸಾಧಕರ ಸಾಲು ಮುಂತಾದವು ಅವರ ಕೃತಿಗಳು. 

ಪಾಟೀಲ ಪುಟ್ಟಪ್ಪನವರ ಒಡೆತನದಲ್ಲಿದ್ದ ವಿಶ್ವವಾಣಿ ಹಾಗೂ ಪ್ರಪಂಚ ಪತ್ರಿಕೆಗಳ ಮೂಲಕ ಪತ್ರಿಕಾ ವ್ಯವಸಾಯ ಪ್ರವೇಶಿಸಿದ ಅವರು ನವನಾಡು ಪತ್ರಿಕೆಯ ಸಂಪಾದಕರೂ ಆಗಿದ್ದರು. ಪ್ರಜಾವಾಣಿ ಹಾಗೂ ವಿಜಯವಾಣಿಯಲ್ಲೂ ಲೇಖನಗಳನ್ನು ಬರೆಯುತ್ತಿದ್ದರು. ಗಂಗಾ-ಕಾವೇರಿ ಎಂಬ ಸಾಪ್ತಾಹಿಕ, ಸಂಕೇತ್ ಎಂಬ ಪಾಕ್ಷಿಕ ಹಾಗೂ  ಸಂಭ್ರಮ ಎಂಬ ವಾರ್ಷಿಕ ಪತ್ರಿಕೆಯನ್ನೂ ನಡೆಸುತ್ತಿದ್ದರು. 

ಧಾರವಾಡದ ಪಾಂಡೇಶ್ವರ ಪ್ರಶಸ್ತಿ, ಮುಂಬೈ ಹವ್ಯಕ ಪ್ರಶಸ್ತಿ, ರಾಜ್ಯ ಕ್ರೀಡಾ ಮಂಡಳಿ ಪ್ರಶಸ್ತಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಶನ್ ಪ್ರಶಸ್ತಿಗಳನ್ನು ಪಡೆದಿದ್ದರು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿ ಹಾಗೂ ಉತ್ತರ ಕರ್ನಾಟಕ ಮಾಧ್ಯಮ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದರು. 19-02-2015 ಹುಬ್ಬಳ್ಳಿಯಲ್ಲಿ ನಿಧನರಾದರು. 

ಶಿವಾನಂದ ಜೋಶಿ

(29 Oct 1937-19 Feb 2015)