About the Author

ಲೇಖಕ ಶಿವಕವಿ ಹಿರೇಮಠ ಜೋಗುರ ಅವರು ಕಲಬುರಗಿ ಜಿಲ್ಲೆಯ ಜೋಗೂರ ಹಿರೇಮಠ ಸಂಸ್ಥಾನದ ವೀರಮಾಹೇಶ್ವರ ವಂಶಜರು. ತಂದೆ ಚಿತ್ರಶೇಖರಯ್ಯ ತಾಯಿ ಗಂಗಮ್ಮ .ಇವರ ಮೂಲ ಹೆಸರು ಶಿವಪೂಜಯ್ಯ. ಆದರೆ, ಕಾವ್ಯನಾಮ ಶಿವಕವಿ . ಪುರಾಣ ಪ್ರವಚನದೊಂದಿಗೆ ಸಾಹಿತ್ಯದ ಸೇವೆಯೂ ಇವರನ್ನು ಆಕರ್ಷಿಸಿದೆ.  ತಮ್ಮದೇ ಆದ ಜ್ಞಾನಗಂಗಾ ಪ್ರಕಾಶನ ಸ್ಥಾಪಿಸಿದ್ದಾರೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿಯ ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದಿದ್ದು 10ನೇ ತರಗತಿಯವರೆಗೆ ಮಾತ್ರ. 9ನೇ ವಯಸ್ಸಿನಲ್ಲೇ ನಾಟಕರಂಗದತ್ತ ಆಕರ್ಷಿತರಾಗಿ, ಮುಂದೆ 1977ರಲ್ಲಿ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ನಾಟ್ಯ ಸಂಘ ಸ್ಥಾಪಿಸಿದರು. 1982ರಲ್ಲಿ, ಗಂವಾರದಲ್ಲಿ ಶ್ರೀ ವಿಶ್ವಾರಾಧ್ಯ ನಾಟ್ಯ ಸಂಘ ಸ್ಥಾಪಿಸಿದರು. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿ (2007) ಜರುಗಿದ ಕಲಬುರಗಿ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷತೆ ವಹಿಸಿದ್ದರು. 

ಕೃತಿಗಳು: ನೀತಿಗೆಲ್ಲಿದೆ ಜಾತಿ (ನಾಟಕ), ಶ್ರೀ ಜಗದ್ಗುರು ರೇಣುಕ ಲೀಲೆ (ನಾಟಕ), ವಿಶ್ವ ಧರ್ಮ ಪ್ರವಚನ. ವಚನ ಚಿಂತನ. ಶ್ರೀ ವೀರೇಶ್ವರ ಚರಿತ್ರೆ. ಸರ್ವಜ್ಞ ವಚನಗಳ ಬೇಡಗು ಬೆರಗು . ಮಠಾಧೀಶರು, ಜೋಗೂರು ಜ್ಯೋತಿ ಚರಿತ್ರೆ, ಶ್ರೀ ಬಮ್ಮಲಿಂಗೇಶ್ವರ ಮಹಾತ್ಮೆ ನಾಟಕ, ಶ್ರೀ ಶಿವಯೋಗೀಶ್ವರ ಮಹಾತ್ಮೆ ನಾಟಕ, ಶ್ರೀ ಸಾಧು ಶಿವಲಿಂಗೇಶ್ವರ ಚರಿತ್ರೆ, ಪಾದಯಾತ್ರೆ (ಪ್ರವಾಸ ಕಥನ), ಮದ್ವಿಗಂಡ ಉಡ್ಕಿ ಹೆಂಡ್ತಿ, ಭಸ್ಮದ ಮಹಿಮೆ, ಶ್ರೀ ಜಗದ್ಗುರು ಸಿದ್ಧಲಿಂಗ ಶಿವಯೋಗಿ, ಉಜ್ಜಯಿನಿ ಪೀಠ, ಅಷ್ಟೋತ್ತರ ಶತನಾಮಾವಳಿ, ನೀಲೂರು ಶ್ರೀ ಗುರು ನೀಲಕಂಠೇಶ್ವರರು, ಮಠಾಧೀಶರು., ಜೋಗೂರಿನ ಕರ್ತೃ ಶ್ರೀಗುರು ಸಿದ್ಧಲಿಂಗ ಶಿವಯೋಗಿ, ಶಿವಕವೀಶನ ವಚನಗಳು ಭಾಗ-2, ಮುಗುಳಖೋಡ ಶ್ರೀ ಯಲ್ಲಾಲಿಂಗೇಶ್ವರ ಮಹಿಮೆ,   ಹೀಗೆ ಒಟ್ಟು 40 ಕೃತಿಗಳನ್ನು ರಚಿಸಿದ್ದಾರೆ.

ಸಂಪಾದಿತ ಕೃತಿಗಳು: ಖೇಡಗಿ ಗುಡ್ಡದ ಶಿವಯೋಗಿಗಳ ಪುರಾಣ, ಕೈವಲ್ಯ ಕಲ್ಪವೃಕ್ಷ ಅನುಭವ ಪದಗಳು, ಎಲ್.ಬಿ.ಕೆ. ಆಲ್ದಾಳ ಅಭಿನಂದನಾ ಗ್ರಂಥ, ಸಗರನಾಡು ಸಂಭ್ರಮ, ನಾ ನಿನ್ನ ಧ್ಯಾನದೊಳೀರುವೆ, ಚಂದ್ರಕಿರಣ, 

ಪ್ರಶಸ್ತಿ-ಗೌರವಗಳು: ಕರ್ನಾಟಕ ನಾಟಕ ಅಕಾಡೆಮಿಯಿಂದ ಗೌರವ, ಜಗದ್ಗುರು ಪಂಚಾಚಾರ್ಯರಿಂದ ಸಾಹಿತ್ಯರತ್ನ ಪ್ರಶಸ್ತಿ, ಹೈದ್ರಾಬಾದ ಕರ್ನಾಟಕ ಸಂಗೀತ ಸೇವಾ ಸಮಿತಿಯಿಂದ ಕಲಾ ಸಾಮ್ರಾಟ ಗೌರವ, ಪಂ.ಪುಟ್ಟರಾಜ ಗವಾಯಿಗಳಿಂದ ಪ್ರವಚನಾರ್ಯರು ಬಿರುದು, ಉಜ್ಜಯಿನಿ ಪೀಠದಿಂದ ಪ್ರವಚನ ಸುಧಾಕರ ಪ್ರಶಸ್ತಿ, ಕಡಗಂಚಿ ಶ್ರೀಮಠದಿಂದ ವೀರಶೈವ ತತ್ವರತ್ನ ಪ್ರಶಸ್ತಿ,, ಬೆಂಗಳೂರಿನಲ್ಲಿ ಶ್ರೀ ಸಿದ್ದಯ್ಯ ಪುರಾಣಿಕ ಪ್ರಶಸ್ತಿ,  ಕರ್ನಾಟಕ ಪುರಾಣ ರತ್ನ ಪ್ರಶಸ್ತಿ ಹೀಗೆ ವಿವಿಧ ಸಂಘ-ಸಂಸ್ಥೆಗಳಿಂದ ಪುರಸ್ಕಾರಗಳು ಲಭಿಸಿವೆ. ಜೇವರ್ಗಿ, ಇಲಕಲ್, ಬಸವಕಲ್ಯಾಣ, ಬೆನಕಟ್ಟಿ, ಗಂವಾರ, ಮಹಾರಾಷ್ಟ್ರದ ಮೈಂದರ್ಗಿ ಹಾಗೂ ಸೋಲಾಪುರದ ವಿವಿಧ ನಾಟ್ಯ ಸಂಘಗಳಲ್ಲಿ ಅಭಿನಯಿಸಿದ್ದಾರೆ. 

ಶಿವಕವಿ ಹಿರೇಮಠ ಜೋಗೂರ

(02 Apr 1957)