About the Author

ಲೇಖಕ ಶಿವರಾಜ ಬ್ಯಾಡರಹಳ್ಳಿ ಅವರು ಬೆಂಗಳೂರು ವಿ.ವಿ. ಯಿಂದ ಸ್ನಾತಕೋತ್ತರ ಪದವೀಧರರು. ‘ಉಜ್ಜನಿ ಚೌಡಮ್ಮ ಒಂದು ಜಾನಪದೀಯ ಅಧ್ಯಯನ’ ವಿಷಯವಾಗಿ ಬೆಂಗಳೂರು ವಿ.ವಿ.ಗೆ ಸಲ್ಲಿಸಿದ ಪಿಎಚ್.ಡಿ ಪ್ರಬಂಧ. ಸದ್ಯ ಬೆಂಗಳೂರಿನ ಆಕ್ಸ್ ಫರ್ಡ್ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ. 

ಕೃತಿಗಳು: ಗುಡಿಸಿಲೊಳಗೊಂದು ಬೆಳ್ಳಿ ಚುಕ್ಕಿ(ಕವನ ಸಂಕಲನ), ಉಜ್ಜನಿ ಚೌಡಮ್ಮ ಒಂದು ಜಾನಪದೀಯ ಅಧ್ಯಯನ(ಪ್ರೌಢ ಪ್ರಬಂಧ), ಪರಿಶೋಧ(ಸಾಹಿತ್ಯ ವಿಮರ್ಶೆ), ಜೇನು ಮನೆಕಲ್ಲು(ಮಕ್ಕಳ ಕಥೆಗಳು), ವಚನ ಪಲ್ಲವಿ(ಸಾಹಿತ್ಯ ವಿಮರ್ಶೆ), ಚಮ್ಮಾವುಗೆಯ ಕಿಡಿಗಳು(ಕವನ ಸಂಕಲನ), ಇಳಿಲ ಬೇರು (ಸಾಹಿತ್ಯ ವಿಮರ್ಶೆ), ಮಣ್ಣಿನ ಮಿಡಿತ (ಕಥಾಸಂಕಲನ) ಸಂಪಾದಿತ: ಕಥಾಮಂಟಪ (ಜನಪದ ಕಥೆಗಳು), ಪಚ್ಚೆ ಗಿಳಿ ಮತ್ತು ಇತರ ಜನಪದ ಕಥೆಗಳು(ಜನಪದ ಕಥೆಗಳು), ನುಡಿ ಬೆಡಗು- ಕಿರಂ ಅವರ ಭಾಷಣ ಮತ್ತು ಬರಹಗಳು, ಅನನ್ಯ ಪ್ರತಿಭೆಯ ಪರಿ(ಸಂ: ಡಾ.ಡಿ.ಆರ್. ನಾಗರಾಜ್ ಅವರ ಸಾಹಿತ್ಯ- ಸಂಸ್ಕೃತಿ, ಸಂಶೋಧನೆ, ವಿಮರ್ಶೆ, ಅನುವಾದ ಗ್ರಂಥಗಳ ಕುರಿತ/ಬರಹಗಳು)

ಪ್ರಶಸ್ತಿಗಳು: ಕುಣಿಗಲ್ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ(2010), ಜಾನಪದ ರತ್ನ ಪ್ರಶಸ್ತಿ(2012), ಡಾ. ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್ ಪ್ರಶಸ್ತಿ(2016), ಮಯೂರವರ್ಮ ಸಾಹಿತ್ಯ ಪ್ರಶಸ್ತಿ (2018), ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿ(2018), ಸಾಧಕ ಪ್ರಶಸ್ತಿ(2018), ಕುವೆಂಪು ರಾಜರಾಜೇಶ್ವರಿ ಸಾಹಿತ್ಯ ರತ್ನ ಪ್ರಶಸ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ(2018), ಸುಧಾ -ಯುಗಾದಿ ಪ್ರಬಂಧ ಸ್ಪರ್ಧೆ ಬಹುಮಾನ (2019), ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ, ಸಮಾವೇಶಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಹಲವು ಸ್ಮರಣ ಸಂಚಿಕೆಗಳಲ್ಲಿ ಸಾಹಿತ್ಯ ಪ್ರತಿಕೆಗಳಲ್ಲಿ ಇವರ ಲೇಖನ, ಪ್ರಬಂಧ ಕವಿತೆ, ವಿಮರ್ಶೆ ಕತೆ ಪ್ರಕಟವಾಗಿವೆ.

ಶಿವರಾಜ ಬ್ಯಾಡರಹಳ್ಳಿ