About the Author

ನಿವೃತ್ತ ಉಪನ್ಯಾಸಕರು, ಲೇಖಕರಾದ ಶ್ರೀಧರ ಉಪ್ಪೂರ ಅವರು 1953 ಜುಲೈ 15ರಂದು ಕುಂದಾಪುರದ ಹಾಲಾಡಿಯಲ್ಲಿ ಜನಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಿಂದ ಸ್ನಾತಕೋತ್ತರ ಪದವಿ ಹಾಗೂ ಯಕ್ಷಗಾನ ಕುರಿತು ಪಿಎಚ್‌ಡಿ ಪದವಿ ಪಡೆದಿರುವ ಇವರು ಬಸ್ರೂರಿನ ಶಾರದಾ ಕಾಲೇಜಿನಲ್ಲಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ  ಇವರು ಯಕ್ಷಗಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಶತಸ್ಮೃತಿ (ಅಭಿನಂದನಾ ಗ್ರಂಥ), ಭಾಗವ ನಾರಾಯಣಪ್ಪ ಉಪ್ಪೂರ, ಯಕ್ಷಗಾನ ಮತ್ತು ನಾಟಕ, ಪ್ರಬಂಜನ ಚರಿತೆ (ಯಕ್ಷಗಾನ ಪ್ರಸಂಗ), ಬಡಗತಿಟ್ಟು ಯಕ್ಷಗಾನ ದ್ರುವತಾರೆ ಶಿರಿಯಾರ ಮಂಜು ನಾಯ್ಕ ಮುಂತಾದವು ಇವರ ಪ್ರಮುಖ ಕೃತಿಗಳು. 

ಶ್ರೀಧರ ಉಪ್ಪೂರ

(15 Jul 1953)