About the Author

ಲೇಖಕ ಸಿದ್ದಗಂಗಯ್ಯ ಹೊಲತಾಳು ಮೂಲತಃ ತುಮಕೂರಿನವರು. (ಜನನ: 1954 ನವೆಂಬರ್‍ 11 ) ಕುರಂಕೋಟೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸಿದ್ಧಗಂಗಾಮಠದಲ್ಲಿ ಹೈಸ್ಕೂಲ್-ಪಿಯುಸಿ , ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಸೋಮಾನಿ ಇನ್ ಸ್ಟಿಟ್ಯೂಟ್ ಆಫ್ ಎಜುಕೇಷನ್ ನಲ್ಲಿ ಬಿ.ಇಡಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಡಿ.ಲಿಟ್ ಪದವಿ ಪಡೆದಿರುತ್ತಾರೆ. ಯಲ್ಲಾಪುರ ನಾಗರಿಕ ವೇದಿಕೆ ಹಾಗೂ ಆದರ್ಶ ಪರಿಸರ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 1979 ರಲ್ಲಿ ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಬಾಲಕಿಯರ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ, ನಂತರ (1979 ರಿಂದ ಜೂನ್ 1988 ) ಚಿಕ್ಕಮಗಳೂರು ಜಿಲ್ಲೆಯ ಆಸಂದಿಯ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. 1988 ರಿಂದ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಪದವಿ ಕಾಲೇಜಿನಲ್ಲಿ ನವೆಂಬರ್ 2014 ರವರೆಗೆ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ತುಮಕೂರು ವಿಶ್ವವಿದ್ಯಾನಿಲಯ ಆರಂಭಗೊಂಡ ಮೊದಲ ಐದು ವರ್ಷ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅತಿಥಿ ಪ್ರಾಧ್ಯಾಪಕ, ಗೌರವ ಮುಖ್ಯಸ್ಥ ಮತ್ತು ಮಾರ್ಗದರ್ಶಿಯಾಗಿದ್ದರು. ಲೇಖಕರಿಗೆ ಹಲವಾರು ಪ್ರಶಸ್ತಿಗಳು ದೊರಕಿರುತ್ತವೆ. ಕೃತಿಗಳು: ಡಿ. ಲಿಟ್ ಸಂಪ್ರಬಂಧ, ಕಾವ್ಯ ಸಂವಹನ, ತಿರುವು, ಆಕಾಶವಾಣಿ ಮತ್ತು ಕಿರಣ, ಹೊಳತಾಳಹಾದಿ( ಆತ್ಮಕಥೆ), ಗ್ರಾಮೀಣ ಪರಿಸರದೆಡೆಗೆ(ಲೇಖನಗಳ ಸಂಗ್ರಹ), ಸ್ವಾತಂತ್ಯ್ರ ಹೋರಾಟದ ಮಹಾಚೇತನಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕಾಂಕ್ರಿಟ್ ಕಾಡಿನ ದಿನಚರಿ(ಸಂಪಾದಕತ್ವದಲ್ಲಿ) ಜೀವನ ಚರಿತ್ರೆಮಾಲೆ, ಕನ್ನಡದ ಮೂಲಕ ಇಂಗ್ಲಿಷ್ ಕಲಿಕೆಮಾಲೆ.

ಸಿದ್ಧಗಂಗಯ್ಯ ಹೊಲತಾಳು

(11 Nov 1954)