About the Author

ಸ್ನೇಹಲತಾ ಗೌನಳ್ಳಿ ಕಲಬುರ್ಗಿಯ ಚಿಂಚೋಳಿ ತಾಲ್ಲೂಕು ಐನೋಳ್ಳಿ ಗ್ರಾಮದವರು. ಸರಕಾರಿ ಶಾಲೆಯಲ್ಲಿ ಒಂದರಿಂದ ಹತ್ತನೇಯ ತರಗತಿವರೆಗೆ ಓದಿದ್ದು ಐನೋಳ್ಳಿಯಲ್ಲಿಯೇ. ಕೌಟುಂಬಿಕ ಕಾರಣಗಳಿಂದ ಐನೋಳ್ಳಿ ಬಿಟ್ಟು ಚಿಂಚೋಳಿಗೆ ಬರಬೇಕಾಯಿತು. ಮುಂದಿನ ವಿದ್ಯಾಭ್ಯಾಸ ಚಿಂಚೋಳಿಯ ಕನ್ಯಾ ಪಿಯುಸಿ ಕಾಲೇಜು ಮತ್ತು ಸಿ.ಬಿ.ಪಾಟೀಲ್ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿದರು, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಕನ್ನಡದಲ್ಲಿ ಎಂ.ಎ. ಮುಗಿಸಿದರು. ಹಿಂಗುಲಾಂಬಿಕ ಕಾಲೇಜಿನಲ್ಲಿ ಬಿ.ಎಡ್.ಪದವಿ ಪಡೆದರು. ಎರಡು ವರ್ಷ ಚಿಂಚೋಳಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಯೊಂದರ ತಯಾರಿಯಲ್ಲಿದ್ದಾರೆ.ಜೊತೆ ಜೊತೆಗೆ ಸಾಹಿತ್ಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಸ್ನೇಹಲತಾ ಗೌನಳ್ಳಿ

(15 Apr 1991)