About the Author

ಲೇಖಕ ಸೋಮಲಿಂಗ ಗೆಣ್ಣೂರ ಅವರು ಮೂಲತಃ ವಿಜಯಪುರ ಜಿಲ್ಲೆಯ ದೇವರಗೆಣ್ಣೂರ ಗ್ರಾಮದವರು. ತಂದೆ-ಗೋಪಾಲ ಚಲವಾದಿ, ತಾಯಿ ಇಂದ್ರವ್ವ ಚಲವಾದಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ದೇವರಗೆಣ್ಣೂರ ಪಡೆದ ಅವರು ಪ್ರೌಢ ಶಿಕ್ಷಣವನ್ನು ಕಂಬಾಗಿ ಹಾಗೂ ಪದವಿ ವ್ಯಾಸಂಗವನ್ನು ವಿಜಯಪುರದ ಎಸ್.ಬಿ.ಆರ್ಟ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಆನಂತರ ಜಮಖಂಡಿ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್. ಪದವಿ ಪಡೆದರು. ಕಲಬುರಗಿಯ ಜೆ.ಟಿ.ಎಸ್. ಕಾಲೇಜಿನಲ್ಲಿ ಪೂರ್ಣಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 1999ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಸೇರ್ಪಡೆಯಾದರು. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ತಹಸಿಲ್ದಾರ್ ಆಗಿ ನೇಮಕರಾದ ಅವರು ಆನಂತರ ಸವದತ್ತಿ ತಾಲ್ಲೂಕಿನ ಮಾನ್ವಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ತಹಸಿಲ್ದಾರ್ ಆಗಿ ಸೇವೆಸಲ್ಲಿಸಿದ್ದಾರೆ. ಜನಾನುರಾಗಿ ಎಂಬ ಕೀರ್ತಿಗೆ ಪಾತ್ರರಾಗಿರುವ ಗೆಣ್ಣೂರ ಅವರು 2014ರಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ, 2019ರಲ್ಲಿ ಚಿಕ್ಕೋಡಿ ಮತ್ತು 2020ರಲ್ಲಿ ವಿಜಯಪುರದಲ್ಲಿ ಸಹಾಯಕ ಆಯುಕ್ತರಾಗಿ ಶ್ಲಾಘನೀಯ ಕಾರ್ಯನಿರ್ವಹಿಸಿದ್ದಾರೆ. ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ ಜನೋಪಯೋಗಿ ಕೆಲಸಕ್ಕಾಗಿ ಜನರಿಂದ ಮನ್ನಣೆ-ಸತ್ಕಾರಗಳನ್ನು ಪಡೆದಿದ್ದ ಅವರು ಪ್ರಸ್ತುತ ಕೃಷ್ಣಾ ಮೇಲ್ದಂಡೆಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಬಾಗಲಕೋಟೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಚಿಕ್ಕಂದಿನಿಂದ ಬುದ್ಧ-ಬಸವ, ಅಂಬೇಡ್ಕರ್ ಸಾಹಿತ್ಯದತ್ತ ಒಲವೊಂದಿರುವ ಅವರು 2016ರಲ್ಲಿ ಸರ್ವಶ್ರೇಷ್ಠ ಭಾರತೀಯ ಕೃತಿ ಪ್ರಕಟಿಸಿದ್ದಾರೆ. 2020ರಲ್ಲಿ 'ಅಂಬೇಡ್ಕರ್ ಮಾರ್ಗ' ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.

ಸೋಮಲಿಂಗ ಗೆಣ್ಣೂರ

(05 Sep 1968)

BY THE AUTHOR