About the Author

ಲೇಖಕ ಡಾ. ಸೂರ್ಯಕಾಂತ ಎಸ್. ಸುಜ್ಯಾತ ಅವರು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದೇಗಾಂವ ಗ್ರಾಮದವರು. ತಂದೆ ಸಾಯಬಣ್ಣ, ತಾಯಿ ಕಾಶೀಬಾಯಿ. ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ನಂತರ ಗುಲಬರ್ಗಾ ವಿ.ವಿ.ಯಿಂದ ಎಂ.ಎ, ಎಂ.ಫಿಲ್ ಹಾಗೂ ಪಿಎಚ್ ಡಿ ಪದವಿ ಪಡೆದರು. ಪ್ರಸ್ತುತ, ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು.  ಕಲಬುರಗಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾರೆ. 

ಕೃತಿಗಳು: ದೇಗಾಂವದ ತತ್ವಪದಗಳು (ಸಂಪಾದನೆ), ತೃತೀಯ ರತ್ನ (ಮೂಲ ಮಹಾತ್ಮ ಫುಲೆ- ಅನುವಾಧ ಕೃತಿ),  ಭೀಮಾ ಕೊರೇಂಗಾಂವ್ ವಿಜಯಸ್ತಂಭ (ಅನುವಾದ), ಗುಲಾಮಗಿರಿ (ಮೂಲ: ಮಹಾತ್ಮ ಫುಲೆ -ಅನುವಾದ), ಗಾಡಗೆ ಮಾಹಾರಾಜರು (ಅನುವಾದ), ಸಂತ ಶಿರೋಮಣಿ ಗುರು ರವಿದಾಸ (ಅನುವಾದ), ದೀಕ್ಷೆ (ಮೂಲ ಬಿ. ಶಾಮಸುಂದರ-ಅನುವಾದ), ಹೈದ್ರಾಬಾದ್ ಕರ್ನಾಟಕ ದಲಿತ ಕಾವ್ಯ (ಸಂಪಾದನೆ), ಪುಷ್ಪಗಿರಿ (ಸಂಪಾದನೆ) ಧ್ಯಾನಶೀಲ (ಸಂಪಾದನೆ)

ಪ್ರಶಸ್ತಿ-ಪುರಸ್ಕಾರಗಳು: ,  ಡಾ. ಅಂಬೇಡ್ಕರ್ ಪ್ರಶಸ್ತಿ, ಶ್ರೀ ವಿಜಯ ಪ್ರಶಸ್ತಿ, ಡಿವಿಜಿ ಪ್ರಶಸ್ತಿ, ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದೆಹಲಿ) ಲಭಿಸಿವೆ. 

 

ಸೂರ್ಯಕಾಂತ ಎಸ್. ಸುಜ್ಯಾತ