About the Author

ಲೇಖಕ ಸುಬ್ಬಣ್ಣ ಅಂಬೆಸಂಗೆ ಅವರು (ಜನನ: 1950 ಜೂನ್ 15) ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಎಕಲಾಸಪೂರದವರು.  ಉಪನ್ಯಾಸಕರಾಗಿ ಸವಯಂ ನಿವೃತ್ತಿ ಪಡೆದರು. 1973ರಲ್ಲಿ ರಚಿಸಿದ ಸ್ತ್ರೀ ಕೇಂದ್ರಿತ 'ಸಿಂದಿ ಬನದಲ್ಲಿ ಸಿಕ್ಕವಳು' ಕಾದಂಬರಿಯು ಬೀದರ ಜಿಲ್ಲೆಯ ಮೊದಲ ಕಾದಂಬರಿ ಎಂದೇ ಹೇಳಲಾಗುತ್ತದೆ. ಅರಳು, ಚೇತನ, ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು, ಬಳ್ಳಿಯ ಹೂ ಬಾಡದಿರಲಿ-ಇವು ಅವರ ಪ್ರಮುಖ ಕತಾ ಸಂಕಲನಗಳು. ‘ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ, ಗುರುತು, ಕಲ್ಯಾಣ ಕರ್ನಾಟಕದ ಕನ್ನಡ ಭಾಷೆ ಮತ್ತು ಇತರ ಪ್ರಬಂಧಗಳು (ಪ್ರಬಂಧ ಸಂಕಲನಗಳು), ಅಡ್ಡಗೊಡೆಯ ಮೇಲಿನ ದೀಪ, ಚಿಂತನಾ, ಗಡಿನಾಡು ಭಾಷಾ ಸಮಸ್ಯೆ, ವಿನಯ ಭಂಡಾರಿ (ಲೇಖನ ಸಂಕಲನಗಳು) ಪ್ರಕಟಿತ ಕೃತಿಗಳು. 1997ರಲ್ಲಿ ಕಲಬುರಗಿ ವಿಶ್ವವಿದ್ಯಾಲಯದ ರಾಜಪುರೋಹಿತ ದತ್ತಿ ಕತಾ ಸ್ಪರ್ಧೆಯಲ್ಲಿ ಅವರ ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತ್ತು.' ಕತೆಗೆ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ ಸಂದಿತ್ತು. ಇವರ ಸಾಹಿತ್ಯ ಸಾಧನೆಗೆ 2003ರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2010ರಲ್ಲಿ ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದಿಂದ 'ಧರಿನಾಡು ಸಿರಿ' ಪ್ರಶಸ್ತಿ ಲಭಿಸಿದ್ದವು. ಅವರು 2020 ನವೆಂಬರ್‌ 08ರಂದು ನಿಧನರಾಗಿದರು.

ಸುಬ್ಬಣ್ಣ ಅಂಬೆಸಂಗೆ

(15 Jun 1950-08 Nov 2020)