About the Author

ಡಾ. ಎ. ಸುಬ್ಬಣ್ಣ ರೈ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕ್ರತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ.  ಕನ್ನಡ ಭಾಷೆ ಮತ್ತು ಸಾಹಿತ್ಯ, ಹಾಗೂ ದ್ರಾವಿಡ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರಗಳು. ಸಂಶೋಧನ ಕರ್ನಾಟಕ, ಹೊಸಪೇಟೆ ತಾಲ್ಲೂಕು ದರ್ಶನ, ಕರ್ನಾಟಕದ ಗ್ರಾಮ ದೇವತೆಗಳು, ಕರ್ನಾಟಕದಲ್ಲಿ ಕುಮಾರರಾಮನ ಪಂಥ, ದ್ರಾವಿಡ ಭಾಷಾ ಅನುವಾದ ಕೃತಿ ದರ್ಶನ, ದ್ರಾವಿಡ ನಿಘಂಟು, ದಕ್ಷಿಣ ಭಾರತ ವಿಶ್ವಕೋಶ, ತುಳು ಸಾಹಿತ್ಯ ಚರಿತ್ರೆ ಇವರ ಸಂಶೋಧನಾ ಯೋಜನೆಗಳು.

ದಕ್ಷಿಣ ಕನ್ನಡ ಜಿಲ್ಲೆಯ ಐತಿಹ್ಯಗಳು, ಪ್ರೊ. ಕೀರ್ತಿನಾಥ ಕುರ್ತಕೋಟಿ, ಗಾಳೆಮ್ಮ, ಕದ್ರಿ, ದ್ರಾವಿಡ ನಿಘಂಟು, ದ್ರಾವಿಡ ಸಂಸ್ಕ್ರತಿ, ತುಳು ಸಾಹಿತ್ಯ ಚರಿತ್ರೆ, ಪ್ರಕಟಿತ ಕೃತಿಗಳು. ದಕ್ಷಿಣ ಕನ್ನಡ ಜಿಲ್ಲೆಯ ಐತಿಹ್ಯಗಳು ಎಂಬ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದ್ದಾರೆ. 

ಎ. ಸುಬ್ಬಣ್ಣ ರೈ

(08 Oct 1961)