About the Author

ಸುಧೀಂದ್ರ ಹಾಲ್ದೊಡ್ಡೇರಿ ಖ್ಯಾತ ವಿಜ್ಞಾನ ಬರೆಹಗಾರರು. ಬೆಂಗಳೂರಿನ ಯು.ವಿ.ಸಿ.ಇ ಯಿಂದ ಬಿ.ಇ. ಹಾಗೂ ಮದ್ರಾಸಿನ ಐಐಟಿ ಯಿಂದ ಎಂ.ಟೆಕ್ ಪದವೀಧರರು. ಪ್ರತಿಷ್ಠಿತ ಸಂಸ್ಥೆಗಳಾದ ಐಐಎಸ್ ಸಿ, ಡಿ.ಆರ್ ಡಿಓ, ಎಚ್.ಎ.ಎಲ್ ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ವೈಮಾಂತರಿಕ್ಷ ಕಂಪನಿಯ ತಾಂತ್ರಿಕ ಸಲಹೆಗಾರರಾಗಿದ್ದರು. ಲೋಕಶಿಕ್ಷಣ ಟ್ರಸ್ಟ್ ನ ಕಸ್ತೂರಿ ಮಾಸಪತ್ರಿಕೆಯಲ್ಲಿ ‘ನವನವೋನ್ಮೇಷ’ ಶೀರ್ಷಿಕೆಯ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ‘ಸೈನ್ಸ್ ಕ್ಲಾಸ್’ ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ನೆಟ್ ನೋಟ’ ಶೀರ್ಷಿಕೆಯ ಅಂಕಣಕಾರರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರೂ ಆಗಿದ್ದರು. ಏಳು ವರ್ಷ ಕಾಲ ಅವರು ವಿವಿಧ  ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧನೆ ಮಾಡಿದ್ದಾರೆ. 

ಕೃತಿಗಳು: ಸದ್ದು! ಸಂಶೋಧನೆ ನಡೆಯುತ್ತಿದೆ, ಬಾಹ್ಯಾಕಾಶವೆಂಬ ಬೆರಗಿನಂಗಳ, ಬೆರಗಿನ ಬೆಳಕಿಂಡಿ (ಲೇಖನಗಳ ಸಂಗ್ರಹ ಕೃತಿ), ವಿಜ್ಞಾನ ಮತ್ತು ಪತ್ರಿಕೋದ್ಯಮ 

ಪ್ರಶಸ್ತಿ-ಪುರಸ್ಕಾರಗಳು: ರಾಷ್ಟ್ರೀಯ ವಿಜ್ಞಾನ ದಿನ (2002) ಪದಕ, ಉತ್ತಮ ತಂತ್ರಜ್ಞಾನ ಕಾರ್ಯಪಡೆ  (2004 ಹಾಗೂ 2005) ಪ್ರಶಸ್ತಿ, ಕರ್ನಾಟಕ ಸರ್ಕಾರದ ವಿಜನ್ ಗ್ರೂಪ್ ಆನ್ ಸೈನ್ಸ್ ಆಂಡ್ ಟೆಕ್ನಾಲಜಿಯಿಂದ (2010) ಶ್ರೇಷ್ಠ ವಿಜ್ಞಾನ ಸಂವಹನಕಾರ ಪುರಸ್ಕಾರ, ಕನ್ನಡ ವಿಜ್ಞಾನ ಪರಿಷತ್ತಿನಿಂದ  (2007) ರಜತೋತ್ಸವ ಪ್ರಶಸ್ತಿ ಲಭಿಸಿದೆ. 

 

ಸುಧೀಂದ್ರ ಹಾಲ್ದೊಡ್ಡೇರಿ

(03 Dec 1961-02 Jul 2021)