About the Author

ಸುಜನಾ ಎಂಬ ಕಾವ್ಯನಾಮದಿಂದ ಬರೆಯುವ ಎಸ್. ನಾರಾಯಣ ಶೆಟ್ಟಿ  ಅವರು ಜನಿಸಿದ್ದು 1930ರಲ್ಲಿ. ಕೃಷ್ಣರಾಜ ನಗರ ತಾಲ್ಲೂಕು ಹೊಳಲು ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯಲ್ಲಿ ಪ್ರಾಧ್ಯಾಪಕರಾಗಿ  ಕಾರ್ಯನಿರ್ವಹಿಸಿ ನಿವೃತ್ತರಾದರು. ಕಥೆ, ಪ್ರಬಂಧ, ವಿಮರ್ಶೆ, ಸಂಪಾದನೆ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 1989ರಲ್ಲಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. 

ಚಿಲಿಪಿಲಿ, ಇಬ್ಬನಿ, ಆರತಿ, ಮಂಗಳಾರತಿ, ಸಹೃದಯಸ್ಪಂದನ, ನಾಣ್ಯಯಾತ್ರೆ ಅವರ ಪ್ರಮುಖ ಕೃತಿಗಳು. ‘ಹೃದಯ ಸಂವಾದ’, ‘ಪರಂಪರೆ’, ‘ಪರಂಪರೆ ಮತ್ತು ಕುವೆಂಪು’ ಅವರ ಪ್ರಮುಖ ವಿಮರ್ಶಾ ಕೃತಿಗಳು.  ಹೃದಯ ಸಂವಾದ, ಪರಂಪರೆ, ಏಜಾಕ್ ಅವರ ಪ್ರಕಟಿತ ಕೃತಿಗಳು. ‘ಯುಗಸಂಧ್ಯಾ' ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ (2002). ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಒಂದೇ ಸೂರಿನಡಿಯಲ್ಲಿ  ಕವನ ಸಂಕಲನಕ್ಕೆ ವರ್ಧಮಾನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನರಸಿವೆ. 

ಸುಜನಾ (ಎಸ್. ನಾರಾಯಣ ಶೆಟ್ಟಿ)

(13 Apr 1930-16 May 2011)

Books about Author

Awards