About the Author

ಸುಮಾ ಕಾಟ್ಕರ್ ಮೂಲತಃ ಗುಜರಾತಿನವರು.ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗುಜರಾತಿ ಭಾಷೆಯಲ್ಲಿ ಮುಗಿಸಿದವರು .ಅಹಮ್ಮದಾಬಾದಲ್ಲಿ ಕಾಲೇಜು ಶಿಕ್ಷಣ ಪಡೆದರು. ಪತ್ರಕರ್ತ, ಸಾಹಿತಿ ಡಾ ಸರಜೂ ಕಾಟ್ಕರ್ ಅವರನ್ನು ಮದುವೆಯಾದ ನಂತರ ಕರ್ನಾಟಕಕ್ಕೆ ಬಂದ ಅವರು ಕನ್ನಡವನ್ನು ಕಲಿತು ಕನ್ನಡದಲ್ಲಿ 'ಸುಮಾ ರಾವ್ ' ಎಂಬ ಹೆಸರಿನಲ್ಲಿ ಅನೇಕ ಲೇಖನ ಗಳನ್ನು ಬರೆದರು. ಅವು 'ತರಂಗ ' ವಾರ ಪತ್ರಿಕೆ ಯಲ್ಲಿ ಪ್ರಕಟವಾದವು. ಬೆಳಗಾವಿ ಯಲ್ಲಿ ಕನ್ನಡ ಮಹಿಳಾ ಕೂಟ ಕಟ್ಟಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದಾರೆ. 'ಸಾವಿತ್ರಿಬಾಯಿ ಫುಲೆ ' ಚಲನಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

ಕೃತಿಗಳು : ಮಾಧವ ಕೌಶಿಕ್‌ ಕವಿತೆಗಳು

ಸುಮಾ ಕಾಟ್ಕರ್