About the Author

ಸುಮಾ ಉಮೇಶಗೌಡ ಹುಟ್ಟುರು ರಾಣಿಬೆನ್ನೂರು. ಹದಿನಾಲ್ಕು ವರ್ಷ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಾಸದ ನಂತರ ಛೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಲ್ಲಿ ಸಧ್ಯದ ವಾಸವಾಗಿದ್ದಾರೆ. ಪ್ರಾಥಮಿಕ ವಿದ್ಯಾಭ್ಯಾಸ ರಾಣಿಬೆನ್ನೂರಿನ ಲಯನ್ಸ್ ಸ್ಕೂಲಿನಲ್ಲಿ. ಹೈಸ್ಕೂಲ್ ಬಿ ಕೆ ಗುಪ್ತಾ ಹೈಸ್ಕೂಲಿನಲ್ಲಿ. ಕಾಲೇಜ್ ಗೆ ಕಾಮರ್ಸ್ ಆಯ್ದುಕೊಂಡು ರಾಜ ರಾಜೇಶ್ವರಿ ಕಾಲೇಜಿನಲ್ಲಿ ಬಿ ಕಾಂ ಪದವಿ ಪೂರೈಸಿದ್ದಾರೆ. ಓದು ಹಾಗು ಬರವಣಿಗೆ ಅವರ ಹವ್ಯಾಸವಾಗಿದೆ. ಮುಖಪುಟದ ಸಾಹಿತ್ಯ ಗ್ರೂಪ್ ನ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದಾರೆ ಹಾಗೂ ಪ್ರತಿಲಿಪಿ ನಡೆಸುವ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ‘ಮನಸುಗಳ ಮಿಲನ’ ಮೊದಲ ಕಾದಂಬರಿ. ಕವನ ಸಂಕಲನ ಹಾಗು ಕಥಾ ಸಂಕಲನದಲ್ಲಿ ಕಿರು ಕಥೆ ಪ್ರಕಟವಾಗಿದೆ. ಕೆಲವು ಕಥೆಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಕೃತಿಗಳು: ‘ಮನಸುಗಳ ಮಿಲನ’

ಸುಮಾ ಉಮೇಶಗೌಡ