About the Author

ಮೂಲತಃ ಕಾಸರಗೋಡಿನವರಾದ ಸುರೇಖಾ ಆರ್‌. ನಾಯ್ಕ್‌ ಅವರ ತಂದೆ-ತಾಯಿ ನೆಲೆಸಿದ್ದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿಯಲ್ಲಿ. ಪ್ರಾಥಮಿಕ, ಮಾಧ್ಯಮಿಕ ಶಿಕ್ಷವನ್ನು ಅರೇಹಳ್ಳಿ, ಸಕಲೇಶಪುರ ಮತ್ತು ಬೇಲೂರಿನಲ್ಲಿ ಪಡೆದ ಸುರೇಖಾ ಅವರು ಕಾಲೇಜು ದಿನಗಳಲ್ಲಿ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿಯಾಗಿದ್ದರು. ಕಾವ್ಯ ರಚನೆ, ಏಕಪಾತ್ರಾಭಿನಯ, ನಾಟಕದಲ್ಲಿ ಅಭಿನಯದಲ್ಲಿ ಪಾಲುಗೊಳ್ಳುತ್ತಿದ್ದರು. ರಾಜ್ಯ ಮಟ್ಟದ ಚರ್ಚಾಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದರು. ಬಿ.ಎ. ಪದವಿ ಪೂರ್ಣಗೊಳಿಸಿದ ನಂತರ ಭಾರತೀಯ ಜೀವ ವಿಮಾ ನಿಗಮದಲ್ಲಿ ಕೆಲಸಕ್ಕೆ ಸೇರಿದರು. 

ಮುಂಬೈಗೆ ವರ್ಗವಾದ ನಂತರ ಮುಂಬೈ ವಿಶ್ವವಿದ್ಯಾಲಯ ಸೇರಿ ಎಂ.ಎ. ಪದವಿಯನ್ನು ಪ್ರಥಮ ರ್‍ಯಾಂಕ್‌ನೊಂದಿಗೆ ಪಾಸಾದರು. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್. ಅಧ್ಯಯನ ನಡೆಸಿದರು. ಬೇಂದ್ರೆ, ಕೆಎಸ್‌ನ, ಹಾಗೂ ಜೀವಿಯವರ ಪ್ರಣಯ ಕಾವ್ಯಗಳ ತೌಲನಿಕ ಅಧ್ಯಯನ ವಿಷಯದಲ್ಲಿ ಪ್ರಬಂಧ ಮಂಡಿಸಿದರು. ಅವರ  ಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ.

ಸುರೇಖಾ ಆರ್. ನಾಯ್ಕ್