About the Author

ಸುರೇಶ್ಎನ್‌ .ಮಲ್ಲಿಗೆ ಮನೆ ಅವರು ಮೂಲತಃ ಶಿವಮೊಗ್ಗೆಯ ತೀರ್ಥಹಳ್ಳಿ ತಾಲೂಕಿನವರು. ಪ್ರಸ್ತುತ ರಾಯಚೂರಿನ ಲಿಂಗಸೂರು ತಾಲೂಕಿನಲ್ಲಿ ಕಳೆದ ಹದಿಮೂರು ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರವಣಿಗೆ, ಫೋಟೋಗ್ರಫಿ, ಓದು, ಕಾಡು ಸುತ್ತಾಟ, ಹಾಡುವಿಕೆ, ಯೋಗಾಸನ, ಕ್ರೀಡೆ ಮತ್ತು ಚಿತ್ರಕಲೆ ಇವರ ಹವ್ಯಾಸಗಳು. “ಕಥೆ ಮತ್ತು ಕವನ” ಇವರ ಆಸಕ್ತಿಯ ಕ್ಷೇತ್ರಗಳು. 'ಅಂತಃಕರಣ' ಇವರ ಮೊದಲ ಕಥಾ ಸಂಕಲನ. "ಜುಮುಕಿ ಹೂ"(ಕವನ ಸಂಕಲನ) ಇವರ ಎರಡನೇ ಪುಸ್ತಕ. ಪ್ರಸ್ತುತ ಇವರ ಕವನ ಸಂಕಲನದಲ್ಲಿ ಮಲೆನಾಡಿನ ನಿಸರ್ಗಸೌಂದರ್ಯ, ಪ್ರಕೃತಿ ಮತ್ತು ಹೆಣ್ಣಿನ ನಡುವಿನ ಸೂಕ್ಷ್ಮ ಸಂವೇದನೆಗಳ ಅಂತ:ಸತ್ವದ ಪ್ರಾಮುಖ್ಯತೆಯನ್ನು ರೂಪಕಾತ್ಮಕವಾಗಿ ದೃಶ್ಯಕಾವ್ಯದಂತೆ ವರ್ಣಿಸಿದಂತಿದೆ. ಇವರ ಕವಿತೆಗಳು ಈಗಾಗಲೇ ಹಲವಾರು ನಿಯತಕಾಲಿಕೆಗಳಲ್ಲಿ, ಯೂಟ್ಯೂಬ್,ಮಾಧ್ಯಮಗಳಲ್ಲಿ ಪ್ರಕಟಗೊಂಡು ಜನಮೆಚ್ಚುಗೆಯನ್ನೂ ಪಡೆದಿದೆ.

ಕೃತಿಗಳು: ಅಂತಃಕರಣ,ಜುಮುಕಿ ಹೂ

ಸುರೇಶ್. ಎನ್‌. ಮಲ್ಲಿಗೆ ಮನೆ