About the Author

ಲೇಖಕ ಸುಶಾಂತ್‌ ಕೋಟ್ಯಾನ್‌ ಮೂಲತಃ ಉಡುಪಿ ಜಿಲ್ಲೆಯ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯವರು.  ಪಿಯುಸಿ ನಂತರ ಆರು ತಿಂಗಳ ಡಿಸಿಎ ಕೋರ್ಸ್‌ ಪೂರ್ಣಗೊಳಿಸಿ, ಪ್ರಸ್ತುತ ಗ್ರಾಫಿಕ್‌ ಡಿಸೈನರ್‌ ಆಗಿದ್ದಾರೆ. ಇವರು ತುಳು ರಂಗಭೂಮಿಯ ಕಲಾವಿದರೂ ಹೌದು.

ಈಗಾಗಲೇ 11 ಕಾದಂಬರಿಗಳನ್ನು, 16 ಕಿರು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಕಥೆ-ಕವನ-ಕಾದಂಬರಿಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಎರಡು ತುಳು ಕಥೆಗಳು ಕಿರುಚಿತ್ರಗಳಾಗಿ ಸ್ಥಳೀಯ ದೂರದರ್ಶನ ಹಾಗೂ ಯುಟ್ಯೂಬ್‌ ಚಾನೆಲ್ ನಲ್ಲಿ ಪ್ರಸಾರಗೊಂಡಿವೆ.

ಸುಶಾಂತ್‌ ಕೋಟ್ಯಾನ್‌