About the Author

ಡಾ.ಬಿ.ಎ. ಬಾಲಕೃಷ್ಣ ಅಡಿಗ ವೃತ್ತಿಯಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಹವ್ಯಾಸಿ ಕನ್ನಡ ವಿಜ್ಞಾನ ಲೇಖಕರು. ಜೀವಶಾಸ್ತ್ರಕ್ಕೆ ಸಂಬಂಧಿಸಿದ ಇವರ ಅನೇಕ ಜನಪ್ರಿಯ ಲೇಖನಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. 40  ವರ್ಷಗಳ ಬೋಧನ ಅನುಭವ ಹೊಂದಿರುವ ಇವರು ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪದವಿ ಪೂರ್ವ ಶಿಕ್ಷಣದ ಪಠ್ಯಪುಸ್ತಕ ರಚನಾ ಸಮಿತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ 'ಜೀವಜಗತ್ತು ವಿಶ್ವಕೋಶ'ದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಂದ ರಚಿತವಾಗಿರುವ ಪ್ರಾಣಿಶಾಸ್ತ್ರ, 'ವೈಶಿಷ್ಟಮಯ ಜೀವಕೋಶ' ಎಂಬ ಪ್ರಸಿದ್ದ ಕೃತಿಗಳು ಹಲವಾರು ಮುದ್ರಣಗಳನ್ನು ಕಂಡಿವೆ. ಪ್ರಸ್ತುತ ಸಿಲಿಕಾನ್ ಸಿಟಿ ಅಕಾಡೆಮಿಯಲ್ಲಿ ಪ್ರಧಾನ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟಿ.ಎ. ಬಾಲಕೃಷ್ಣ ಅಡಿಗ