About the Author

ಕವಯತ್ರಿ ಮಹೇಶ್ವರಿ ಅವರು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಸ್ನಾತಕೋತ್ತರ ಪದವಿ ಪಡೆದವರು. 1928 ಮಾರ್ಚ್ 18 ರಂದು ಕಾಸರಗೋಡಿನ ಬೆಳಾಗಾಮದ ಉಜೋಡಿಯಲ್ಲಿ ಜನಿಸಿದರು. ಕನ್ನಡದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ವಿಭಾಗ ಮುಖ್ಯಸ್ಥೆಯಾಗಿ 2014ರಲ್ಲಿ ನಿವೃತ್ತರಾಗಿದ್ದಾರೆ. ಇವರ ‘ಇದು ಮಾನುಷಿಯ ಓದು’ ಕೃತಿಗೆ ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ ದೊರಕಿದೆ. ಅಲ್ಲದೆ ‘ಮುಗಿಲ ಹಕ್ಕಿ’ ಕವನಸಂಕಲನಕ್ಕೆ ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ ಹಾಗೂ ‘ಧರೆಯು ಗರುವದಿ ಮೆರೆಯಲಿ’ ಕವನಸಂಕಲನಕ್ಕೆ ಸುಶೀಲಾಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ದೊರಕಿದೆ. ’ಮುಗಿಲ ಹಕ್ಕಿ, ಇದು ಮಾನುಷಿಯ ಓದು, ಮಧುರವೇ ಕಾರ ಕವನ ಸಂಕಲನ. ’ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ, ವಿ.ಎಂ. ಇನಾಂದಾರ ವಿಮರ್ಶಾ ಪ್ರಶಸ್ತಿ, ಸುಶೀಲಾಶೆಟ್ಟಿ ಸ್ಮಾರಕ ಅಖಿಲ ಭಾರತಮಟ್ಟದ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, 'ಅಣ್ಣಯ್ಯ ಮಾಸ್ತರ್‌' ಪ್ರಶಸ್ತಿ’ ಪಡೆದಿದ್ದಾರೆ.

ಯು. ಮಹೇಶ್ವರಿ 

(18 Mar 1928)