About the Author

ಹಿರಿಯ ಲೇಖಕ, ನಾಟಕಕಾರ ವಿ.ಮಾ. ಜಗದೀಶ್ ಶಿವಮೊಗ್ಗ ಜಿಲ್ಲೆಯ ಚಾಮೇನಹಳ್ಳಿ ಗ್ರಾಮದವರು. ತಂದೆ ವಿ.ರಾಜಶೇಖರಯ್ಯ. ಕನ್ನಡ ಎಂ.ಎ. ಪದವೀಧರರಾದ ಅವರು ಆಲ್ ಇಂಡಿಯಾ ರೇಡಿಯೋ ಆಕಾಶವಾಣಿಯಲ್ಲಿ 1976ರಿಂದ 1987 ರವರೆಗೆ ಪ್ರಸಾರ ನಿರ್ವಾಹಕರಾಗಿ ಕಾರ್ಯನಿರ್ವಹಿಸಿ ಆ ನಂತರ ಇಎಂಪಿಸಿ - ಐಜಿಎನ್ಓಯು (ಜ್ಞಾನವಾಣಿ)ಯಲ್ಲಿ ನಿಲಯ ನಿರ್ವಾಹಕರಾಗಿ ಸೇವೆಸಲ್ಲಿಸಿ ಆನಂತರದಲ್ಲಿ ಕ್ಷೇತ್ರ ಪ್ರಚಾರ ಅಧಿಕಾರಿಯಾಗಿಯೂ ಸೇವೆಸಲ್ಲಿಸಿದ್ದಾರೆ. ಕವಿತೆ, ಕಾದಂಬರಿ, ನಾಟಕ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ.

ವಿ.ಮಾ. ಜಗದೀಶ್

(27 Mar 1950)