About the Author

ಸದ್ಯ ಕಲಬುರ್ಗಿ ನಿವಾಸಿಯಾಗಿರುವ ಕವಿ ವಸಂತ ಕುಷ್ಟಗಿ ಅವರು ಮೂಲತಃ ಹಿಂದಿನ ರಾಯಚೂರು ಜಿಲ್ಲೆ ಕುಷ್ಟಗಿಯವರು. ವಸಂತ ಕುಷ್ಟಗಿ ಅವರು ಜನಿಸಿದ್ದು 1936 ಅಕ್ಟೋಬರ್ 10ರಂದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಪ್ರವೃತ್ತಿಯಿಂದ ಕವಿ-ಲೇಖಕ.

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ನಂತರ ಅವರು ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ನಂತರ ಕಲಬುರ್ಗಿಯ ಎಂ.ಎಸ್.ಐ ಹಾಗೂ ಎನ್‌.ವಿ. ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿ ನಂತರ ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿದ್ದಾರೆ.

ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ಆನಾಮಿಕ ದತ್ತಿ ಪ್ರಶಸ್ತಿ, ಭಾರತ ರತ್ನ ಸರ್. ಎಂ.ವಿ. ಪ್ರತಿಷ್ಠಾನ ಪ್ರಶಸ್ತಿ, ಬೇಲಾಡಿ ಮಾರಣ್ಣ ಮಾಡ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಸಂದಿವೆ.

ಭಕ್ತಿ ಗೋಪುರ, ಹೊಸಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯಬಾನು, ಚಂದ್ರಲಾ, ಮಾನ್ಯಖೇಟ, ಕಾವ್ಯಶ್ರೀ ತೊದಲು, ಐದ್ಹತ್ತು, ಕಥಾ ಸಮೂಹ, ತವಗಶ್ರೀ ಇವರ ಪ್ರಕಟಿತ ಕೃತಿಗಳು.

ವಸಂತ ಕುಷ್ಟಗಿ

(10 Oct 1936)