About the Author

ವಿಶ್ವನಾಥ ಶರ್ಮ ಅವರ ಪೂರ್ಣ ಹೆಸರು-ಅಕ್ಕಿಹೆಬ್ಬಾಳು ನಾರಾಯಣಸ್ವಾಮಿ ವಿಶ್ವನಾಥ ಶರ್ಮ. ಚಿಕ್ಕಮಗಳೂರು ಜಿಲ್ಲೆಯ ಬಾಳೇಹೊನ್ನೂರಿನಲ್ಲಿ 1947ರ ಏಪ್ರಿಲ್ ರಂದು ಜನನ. ತಾಯಿ ನರಸಿಪುರದ ಸಾವಿತ್ರಮ್ಮ. ಮೈಸೂರಿನಲ್ಲಿ ಆರಂಭಿಕ ಶಿಕ್ಷಣದ ನಂತರ ಎನ್.ಐ.ಇ. ನಲ್ಲಿ (1969) ಎಂಜಿನಿಯರಿಂಗ್ ಓದಿದರು. ನಂತರ, ಎಂ.ಎಸ್. ಪದವಿಗಾಗಿ ಅಮೆರಿಕದ ಇಲಿನಾಯ್ ಸೇರಿ ಕಂಪ್ಯೂಟರ್‌ ಡಿಸೈನರ್ ವೃತ್ತಿ(1972) ಆರಂಭಿಸಿದರು. ಕಂಪ್ಯೂಟರ್‌-ಕಮ್ಯುನಿಕೇಷನ್‌ ಕ್ಷೇತ್ರದಲ್ಲಿ ದುಡಿಯುತ್ತಾ ಸುಮಾರು 25 ವಿವಿಧ ಪೆಟೆಂಟ್ ಗಳನ್ನು ಪಡೆದಿದ್ದಾರೆ.

1987ರಲ್ಲಿ, ಕ್ರಿಯಾಯೋಗ ದೀಕ್ಷೆ ಪಡೆದು, ‌ಈಗ ಅಮೆರಿಕೆಯಲ್ಲಿ ಪುರೋಹಿತರು. ಜೊತೆಗೆ, ಅಮೆರಿಕನ್ನರಿಗೆ ಸನಾತನ ಧರ್ಮ ಹಾಗೂ ಯೋಗಾಸನ ಶಾಸ್ತ್ರದಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ. ವರಕವಿ ದ.ರಾ.ಬೇಂದ್ರೆ ಅವರ ಮೇಲೆ ಯೋಗಾಭ್ಯಾಸದ ಪ್ರಭಾವದ ಹಿನ್ನೆಲೆಯಲ್ಲಿ ಅವರ ಕಾವ್ಯಗಳನ್ನು ವಿಶ್ಲೇಷಿಸಿದ ಕೃತಿ ’ಶ್ರೀ ಬೇಂದ್ರೆ ಕಾವ್ಯ ಯೌಗಿಕ ದೃಷ್ಟಿ’. ಇದು ಇವರ ಮೊದಲ ಪುಸ್ತಕ.  

ವಿಶ್ವನಾಥ ಶರ್ಮ

(26 Apr 1947)