About the Author

ವೈ. ಅವನೀಂದ್ರನಾಥ್ ರಾವ್ (1971) ದೆಹಲಿಯ ಸಂಸ್ಕೃತಿ ಮಂತ್ರಾಲಯದ ಕೇಂದ್ರ ಸಚಿವಾಲಯ ಗ್ರಂಥಾಲಯದ ಅಧಿಕಾರಿ. ಉಡುಪಿ ಜಿಲ್ಲೆಯ ಎಲ್ಲೂರಿನವರು. ಉಚ್ಚಿಲದ ಸರಸ್ವತಿ ಮಂದಿರ, ಕುಂದಾಪುರದ ಬೋರ್ಡ್ ಹೈಸ್ಕೂಲ್ ಅಲ್ಲದೆ ಅದಮಾರು, ಪೊಲಿಪು, ಸುಳ್ಯದ ಸಬ್ಬಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಬ್ರಹ್ಮಾವರದ ಎಸ್.ಎಂ.ಎಸ್ ಮತ್ತು ಮುಲ್ಕಿಯ ವಿಜಯ ಕಾಲೇಜು ಮೂಲಕ ವಾಣಿಜ್ಯ ಪದವಿ ಪಡೆದರು.

ಕ್ರಿಕೆಟಿಗನಾಗಿದ್ದ ಇವರು ವಿಶ್ವವಿದ್ಯಾಲಯದ 'ಬಿ.ಸಿ.ಆಳ್ವ ಟ್ರೋಫಿ' ಪಂದ್ಯಾವಳಿಯಲ್ಲಿ ಆಡಿದ್ದರು. ಕೆಲಸಮಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದೋಗಿಯಾಗಿದ್ದರು. ಉನ್ನತ ಶಿಕ್ಷಣದ ಬಳಿಕ ಮೂಡಬಿದರೆ, ಮುಲ್ಕಿ,ಮಂಗಳೂರಿನಲ್ಲಿ ಗ್ರಂಥಪಾಲಕರಾಗಿ ಮತ್ತು ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದರು.

ಮಂಗಳೂರು ಆಕಾಶವಾಣಿಯಲ್ಲಿ ನಿರೂಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಹುಮುಖ ಪ್ರತಿಭೆಯ ಅವನೀಂದ್ರನಾಥ್ ಕಳೆದ ಎರಡು ದಶಕಗಳಿಂದ ದೆಹಲಿಯಲ್ಲಿದ್ದಾರೆ. ಸಾಹಿತ್ಯ, ಸಂಘಟನೆ, ನಾಟಕ, ಸಂಶೋಧನೆಯಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿದ್ದಾರೆ.

ಸಮಯ ಸಂದರ್ಭ( ಪ್ರಬಂಧಗಳು), ದೆಹಲಿಯ ಕನ್ನಡ ಜಗತ್ತಿನಲ್ಲಿ (ಸಂಸ್ಕೃತಿ ಕಥನ), ಸಂಸ್ಕೃತಿ ಸಂವೇದ (ವಿಮರ್ಶೆ), ಭೂಮಿಗಾನ ಆಕಾಶಯಾನ (ರೇಡಿಯೋ ಬರಹಗಳು) ಮತ್ತು ಒಲಿಂಪಿಕ್ ಚರಿತೆ (ಕ್ರೀಡೆ) ಅವರ ಕೃತಿಗಳು. 'ರಾಜಧಾನಿಯಲ್ಲಿ ಕರ್ನಾಟಕ' ಮತ್ತು 'ನಾನು ಕಂಡ ನನ್ನ ದೇಶ' ಕೃತಿಗಳನ್ನು ಸಂಪಾದಿಸಿದ್ದಾರೆ.

ದೆಹಲಿ ಕರ್ನಾಟಕ ಸಂಘದ 'ಅಭಿಮತ' ಪತ್ರಿಕೆಯ ಪ್ರಧಾನ ಸಂಪಾದಕರು. ಅವನೀಂದ್ರನಾಥ್ ಅವರು ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಮತ್ತು ಕೋಶಾಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ. ಅವರು ದೆಹಲಿ ತುಳು ಸಿರಿಯ ಪ್ರಥಮ ಅಧ್ಯಕ್ಷರು. ಬಿ.ಎಂ.ಶ್ರೀ ಪ್ರತಿಷ್ಠಾನದ ಪ್ರಶಸ್ತಿ, ತುಳುವ ಐಸಿರಿ ಪ್ರಶಸ್ತಿ, ಪ್ರಭಾಕರ ರಾವ್ ಸ್ಮಾರಕ ನಾಟಕ ಬಹುಮಾನ ಮೊದಲಾದ ಗೌರವ ಪಡೆದಿದ್ದಾರೆ. ಸಚಿವಾಲಯ ಗ್ರಂಥಾಲಯಗಳ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ವೈ. ಅವನೀಂದ್ರನಾಥ್ ರಾವ್

(12 Oct 1971)