About the Author

ಮಕ್ಕಳ ಕತೆಗಾರ ಯಲ್ಲಪ್ಪ ಹಂದ್ರಾಳ ಅವರು 1979 ಜನೆವರಿ 01ರಂದು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮೇವುಂಡಿ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ನಾಟಕ, ವಚನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿ. ಶಾಲಾ ಮಕ್ಕಳಿಗಾಗಿ ಐದು ಕಿರುನಾಟಕಗಳನ್ನು ಬರೆದು ನಿರ್ದೆಶಿಸಿದ್ದಾರೆ. ‘ಕೋಣೆ ಕೂಸು ಕೊಳೀತು, ಓಣಿ ಕೂಸು ಬೆಳೀತು, ಸೊಳ್ಳೆ ಮತ್ತು ಶಿಕ್ಷಕ, ಮನೆಯೇ ಕಾರಣ, ಸಕಾಲ-ಸುಕಾಲ ಮತ್ತು ಯಮಲೋಕದಲ್ಲಿ ತಲ್ಲಣ ನಾಟಕಗಳು ಪ್ರದರ್ಶನಗೊಂಡಿವೆ. ಮಕ್ಕಳ ನಡುವೆ ಸಾಹಿತ್ಯ ಸಮಯ ಸೃಷ್ಟಿಸುತ್ತ 'ಹೊಯ್ದಾಟ' ಎಂಬ ಕವನ ಸಂಕಲನವನ್ನು ಹಾಗೂ ಲೇಖಕಿ ಸುಕೀರ್ತಿ ಭಟ್ನಾಗರ್ ಬರೆದ 'ಅಮರೊ' ಎಂಬ ಹಿಂದಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ವನಪ್ರಿಯ' ಎಂಬ ಅಂಕಿತದಿಂದ ನೂರಾರು ವಚನಗಳನ್ನು ಬರೆದಿದ್ದು ಅಂತರ್ಜಾಲ ತಾಣದಲ್ಲಿ ಪ್ರಕಟಣೆ ಕಂಡಿವೆ.

ಯಲ್ಲಪ್ಪ ಹಂದ್ರಾಳ

(01 Jan 1979)

Books by Author