About the Author

ಯಲ್ಲಪ್ಪ ಹಲಕುರ್ಕಿ ಅವರು ಗದಗ ಜಿಲ್ಲೆಯ ರೋಣ ತಾಲೂಕಿನ (01-06-1954) ಯಾವಗಲ್ ಗ್ರಾಮದವರು. 13 ಗ್ರಂಥಗಳನ್ನು ರಚಿಸಿದ್ದಾರೆ. ವಚನ, ಕವನ, ಜೀವನ ಚರಿತ್ರೆ ರಚಿಸಿದ್ದು, ರಾಜ್ಯ ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. 

ಆಕಾಶವಾಣಿಯಲ್ಲಿ 200ಕ್ಕೂ ಹೆಚ್ಚು ಕವನಗಳು ಪ್ರಸಾರವಾಗಿವೆ. ಬಾಲ್ಯದಲ್ಲಿ ಬಡತನದ ಕರಾಳ ಅನುಭವ, ಸಜ್ಜನರ ಸಂಗ, ಬಯಲುಸೀಮೆ ಪರಿಸರ, ವಾಸ್ತವ ಸಮಾಜ ಇವರ ಕಾವ್ಯಕ್ಕೆ ಪ್ರೇರಣೆಯಾಗಿವೆ. ಡಿವೈನ್ ಔರಾ ಮತ್ತು ಡಿವೈನ್ ಲೈಟ್ ಈ ಎರಡೂ ಕೃತಿಗಳು ಇವರ ವಚನಗಳ ಸಂಕಲನದ ಇಂಗ್ಲಿಷ್ ಅನುವಾದ ಕೃತಿಗಳು. ಇವುಗಳನ್ನು ಕ್ರಮವಾಗಿ ಎಸ್.ಎಂ. ಆಂಗಡಿ ಹಾಗೂ ವೈ.ಎನ್. ಹಿರೇಕೊಪ್ಪ ಅವರು ಅನುವಾದಿಸಿದ್ದಾರೆ. 

ಕೃತಿಗಳು: ಹಠಯೋಗಿ ಜೀವನ ಚರಿತ್ರೆ), ಶಿವಯೋಗ ಮಂದಿರ, ವಚನೋತ್ಸವ ಹಾಗೂ ರುದ್ರಪ್ರಭೆ (ಧಾರ್ಮಿಕ-ಸಾಮಾಜಿಕ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿ ವಚನಗಳ  ಮಾದರಿಯಲ್ಲಿ ವಚನಗಳ ಸಂಕಲನ) ವಚನ ಪಂಚಾಕ್ಷರಿ, ಚಿಕೇನಕೊಪ್ಪದ ಚೆನ್ನವೀರ ಶರಣರು-ವಚನ ಸಂಗಮೇಶ (ಇವು ಈ ಮಹನೀಯರ ಜೀವನ ಚರಿತ್ರೆ ಆಧರಿತ ವಚನಗಳ ಸಂಕಲನಗಳು) ನನ್ನ ಕಾವ್ಯ, ರಾತ್ರಿಗಳು ಹೀಗೂ ಇರುತ್ತವೆ ಮತ್ತು ತೇರು ಸಾಗುವ ದಾರಿ-ಈ ಮೂರು ಕವನ ಸಂಕಲನಗಳು. ಯಲ್ಲಪ್ಪ ಹಲಕುರ್ಕಿ ಅವರು 19-03-2015ರಂದು ನಿಧನರಾದರು.

ಯಲ್ಲಪ್ಪ ಹಲಕುರ್ಕಿ

(01 Jun 1954-19 Mar 2015)