ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು

Author : ಅಂಶಿ ಪ್ರಸನ್ನಕುಮಾರ್‌

Pages 184

₹ 270.00




Year of Publication: 2020
Published by: ಚಿಂತನ ಚಿತ್ತಾರ
Address: # 2, ಮುಡಾ ಕಾಂಪ್ಲೆಕ್ಸ್, ಐ ಬ್ಲಾಕ್, ರಾಮಕೃಷ್ಣನಗರ, ಚದುರಂಗ ರಸ್ತೆ, ಆಂದೋಲನ ಸರ್ಕಲ್ ಹತ್ತಿರ, ಮೈಸೂರು-570022
Phone: 9060701480

Synopsys

ಪತ್ರಕರ್ತ ಹಾಗೂ ಲೇಖಕ ಅಂಶಿ ಪ್ರಸನ್ನಕುಮಾರ ಅವರ ಕೃತಿ-ಮೈಸೂರು ಸುತ್ತಮುತ್ತ ನೂರೊಂದು ಪ್ರವಾಸಿ ತಾಣಗಳು. ಮೈಸೂರು ಕೇವಲ ಐತಿಹಾಸಿಕ ನಗರ ಮಾತ್ರವಲ್ಲ; ಅದು ಸಾಂಸ್ಕೃತಿಕ ನಗರವೂ ಹೌದು. ಆದ್ದರಿಂದ, ನಗರಗಳ ಇತಿಹಾಸದಲ್ಲಿ ಮೈಸೂರಿಗೆ ತನ್ನದೇ ಆದ ವಿಶಿಷ್ಟ ಸ್ಥಾನವುಂಟು. ಹವಾಮಾನ-ಹಸಿರು ಪರಿಸರದ ದೃಷ್ಟಿಯಿಂದಲೂ ಮೈಸೂರು ಜನರ ಗಮನ ಸೆಳೆಯುತ್ತಲೇ ಬಂದಿದೆ. ಟಿಪ್ಪುಸುಲ್ತಾನನ ಆಳ್ವಿಕೆ, ಬ್ರಿಟಿಷರ ವಿರುದ್ಧದ ಆತನ ಹೋರಾಟ, ತದನಂತರ, ಅರಸು ಮನೆತನಗಳ ಅಭಿವೃದ್ಧಿ ಕಾರ್ಯಗಳು, ಐಇತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿಕೊಂಡು ಬಂದ ಕಳಕಳಿ, ನೈಸರ್ಗಿಕ ತಾಣಗಳ ಅಭಿವೃದ್ಧಿ ಇತ್ಯಾದಿ ಹತ್ತು ಹಲವು ಅಂಶಗಳು ಮೈಸೂರು ಸುತ್ತಮುತ್ತ ತನ್ನದೇ ಆದ ಸಿರಿವಂತಿಕೆಯಿಂದ ಮೆರೆಯುತ್ತಿದೆ. ಮೈಸೂರು ದಸರಾ, ಚಾಮುಂಡೇಶ್ವರಿ ಬೆಟ್ಟ, ಕನ್ನಂಬಾಡಿ ಆಣೆಕಟ್ಟು, ಚರ್ಚುಗಳು, ಜಲಪಾತಗಳು ಹೀಗೆ ನೋಡುಗರ ಕಣ್ಮನ ಸೆಳೆಯುತ್ತವೆ. ಈ ಎಲ್ಲ ಆಕರ್ಷಣೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ ಕೃತಿ ಇದು.

About the Author

ಅಂಶಿ ಪ್ರಸನ್ನಕುಮಾರ್‌

ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು  ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್‌ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...

READ MORE

Related Books