About the Author

ಎ.ಎಸ್‌. ಪ್ರಭಾಕರ ಅವರು ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯರಬಳ್ಳಿಯವರು. ಪ್ರಸ್ತುತ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  26 ವರ್ಷಗಳ ಬೋಧನ ಅನುಭವ ಹೊಂದಿದ್ದು ಬುಡಕಟ್ಟು ಸಮುದಾಯಗಳ ಅಧ್ಯಯನ ಅವರ ವಿಶೇಷ ಪರಿಣತಿ ಕ್ಷೇತ್ರವಾಗಿದೆ. ಬುಡಕಟ್ಟು ಸಮುದಾಯಗಳ ಮೌಖಿಕ ಸಾಹಿತ್ಯ ಮತ್ತು ಪರಂಪರೆ, ಬುಡಕಟ್ಟು ಸಮುದಾಯಗಳ ಆಧುನಿಕ ಮುಖಾಮುಖಿ, ಬುಡಕಟ್ಟು ಸಮುದಾಯಗಳ ಅಭಿವೃದ್ದಿ ಮತ್ತು ಸಾಮಾಜಿಕ ಬದಲಾವಣೆ ಇವರ ಆಸಕ್ತಿಯ ಅಧ್ಯಯನದ ಕ್ಷೇತ್ರಗಳು.   

ಕೃತಿಗಳು: ಮ್ಯಾಸ ಬೇಡರ ಕಥನಗಳು, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು,  ಬುಡಕಟ್ಟು ಅಭಿವೃದ್ಧಿ ಮೀಮಾಂಸೆ, ಡೊಂಬರು: ಒಂದು ಚಾರಿತ್ರಿಕ ಹಿನ್ನೋಟ, ಆದಿವಾಸಿ ಆಖ್ಯಾನ, ಹೆಳವರು, ಲೋಹಿಯಾ: ವರ್ತಮಾನದ ಮುಖಾಮುಖಿ, ಕರ್ನಾಟಕ ಬುಡಕಟ್ಟು ಚಿತ್ರ ಸಂಪುಟ, ಕರ್ನಾಟಕ ಬುಡಕಟ್ಟು ಸಚಿತ್ರ ಕೋಶ, ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು, ಚಹರೆಗಳೆಂದರೆ ಗಾಯಗಳೂ ಹೌದು, ಮುಗ್ಧ ನಗುವೊಂದರ ಕಣ್ಮರೆ. 

 

 

 

 

 

 

ಎ.ಎಸ್. ಪ್ರಭಾಕರ

(29 Apr 1970)