About the Author

ಡಾ. ಅಹಲ್ಯಾ ಚಿಂತಾಮಣಿ ಅವರು ಐದು ದಶಕಗಳಿಂದ ದೆಹಲಿಯಲ್ಲಿ ವಾಸವಿರುವ ನಿವೃತ್ತ ಪ್ರಾಧ್ಯಾಪಕರು. ಸಾಹಿತಿ ಹಾಗೂ ಕಲಾವಿದರಾದ ಅವರು ದೆಹಲಿ ಕನ್ನಡಿಗರಿಗೆ ಚಿರಪರಿಚಿತರು.

ಬಿ.ಆರ್.ವೆಂಕಟೇಶ್ವರ ರಾವ್ ಹಾಗೂ ನಂಜಮ್ಮ ದಂಪತಿಗಳ ಪುತ್ರಿಯಾಗಿ 1939ರ ಜನವರಿ 1 ರಂದು ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಜನಿಸಿದರು. ಕರುನಾಡಿನಲ್ಲಿಯೇ ವಿದ್ಯಾಭ್ಯಾಸವನ್ನು ಪಡೆದು ಬಳಿಕ ಬನಾರಸ್ ನಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು, ದೆಹಲಿಯಲ್ಲಿ ಡಾಕ್ಟರೇಟ್ ಪದವಿ ಪಡೆದರು.
1958ರಲ್ಲಿ ಬಿ.ಎಂ.ಚಿಂತಾಮಣಿ ಇವರನ್ನು ವಿವಾಹವಾದ ಬಳಿಕ ಬನಾರಸ್ ನಲ್ಲಿ 8 ವರ್ಷ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. 1969ರಲ್ಲಿ ದೆಹಲಿಗೆ ಬಂದರು. ದೆಹಲಿಯಲ್ಲಿ 38 ವರ್ಷ ಗಾರ್ಗಿ ಕಾಲೇಜಿನಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಕತೆ, ಕವಿತೆ, ಲೇಖನ ಬರೆಯುವ ಡಾ. ಅಹಲ್ಯಾ ಚಿಂತಾಮಣಿ ಅವರು ದೆಹಲಿಯಲ್ಲಿ ನಡೆದ ಹಲವಾರು ವಿಚಾರ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿದವರು. ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸಿ ಕಿರಿಯರಿಗೆ ಸ್ಪೂರ್ತಿ ತುಂಬಿದವರು. ದೆಹಲಿಯಲ್ಲಿ ನಡೆದ ಹಲವಾರು ನಾಟಕಗಳಲ್ಲಿ ಪಾತ್ರ ವಹಿಸಿ ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.

ಅಹಲ್ಯ ಚಿಂತಾಮಣಿ