ರಸ್ಟಿಯ ಸಾಹಸಗಳು

Author : ಅಹಲ್ಯ ಚಿಂತಾಮಣಿ

Pages 60

₹ 25.00
Year of Publication: 1995
Published by: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ
Address: ಎ-5, ಗ್ರೀನ್ ಪಾರ್ಕ್, ಹೊಸದೆಹಲಿ, 110016

Synopsys

ರಸ್ಕಿನ್ ಬಾಂಡ್ ಭಾರತದ ಸುಪ್ರಸಿದ್ದ ಲೇಖಕರು. ತಮ್ಮ 17ನೇ ವಯಸ್ಸಿನಲ್ಲಿ ಬರೆದ ಅವರ ಮೊದಲ ಕಾದಂಬರಿ ’ದ ರೂವಕ್ ಆನ್ ದ ರೂಫ್’ಗೆ ರೈಸ್ ಸ್ಮಾರಕ ಪ್ರಶಸ್ತಿ ಲಭಿಸಿದೆ. ರಸ್ಕಿನ್‌ ಅವರಿಗೆ ಹೆಚ್ಚು ಮನ್ನಣೆ ತಂದುಕೊಟ್ಟ ಕೃತಿ ’ಅಡ್ವೆಂಚರ್ಸ್ ಆಫ್‌ ರಸ್ಟಿ’. ಬಾಲ್ಯದ ಅನುಭವಗಳೇ ರಸ್ಟಿ ಪಾತ್ರ ಸೃಷ್ಟಿಯಾಗಲು ಕಾರಣ ಎಂದು ಅವರು ಒಂದೆಡೆ ಹೇಳಿಕೊಂಡಿದ್ದಾರೆ. 

ಕೃತಿಯ ಕನ್ನಡ ಅನುವಾದ ’ರಸ್ಟಿಯ ಸಾಹಸಗಳು’. ಮಕ್ಕಳನ್ನು ರಂಜಿಸುವಂತಹ, ಚಿಣ್ಣರ ಕಲ್ಪನೆಯ ಎಲ್ಲೆಯನ್ನು ಹಿಗ್ಗಿಸುವಂತಹ ಕತೆಗಳನ್ನು ನೀಡಿರುವ ರಸ್ಕಿನ್ ಬಾಂಡ್‌ ಇಲ್ಲಿ ರಸ್ಟಿ ಮೂಲಕ ಫ್ಯಾಂಟಸಿ ಲೋಕವನ್ನೂ, ವಾಸ್ತವ ಜಗತ್ತನ್ನೂ ತೂಗಿದ್ದಾರೆ. ಅಹಲ್ಯ ಚಿಂತಾಮಣಿಯವರು ಆಪ್ತ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಅಹಲ್ಯ ಚಿಂತಾಮಣಿ

ಡಾ. ಅಹಲ್ಯಾ ಚಿಂತಾಮಣಿ ಅವರು ಐದು ದಶಕಗಳಿಂದ ದೆಹಲಿಯಲ್ಲಿ ವಾಸವಿರುವ ನಿವೃತ್ತ ಪ್ರಾಧ್ಯಾಪಕರು. ಸಾಹಿತಿ ಹಾಗೂ ಕಲಾವಿದರಾದ ಅವರು ದೆಹಲಿ ಕನ್ನಡಿಗರಿಗೆ ಚಿರಪರಿಚಿತರು. ಬಿ.ಆರ್.ವೆಂಕಟೇಶ್ವರ ರಾವ್ ಹಾಗೂ ನಂಜಮ್ಮ ದಂಪತಿಗಳ ಪುತ್ರಿಯಾಗಿ 1939ರ ಜನವರಿ 1 ರಂದು ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ಜನಿಸಿದರು. ಕರುನಾಡಿನಲ್ಲಿಯೇ ವಿದ್ಯಾಭ್ಯಾಸವನ್ನು ಪಡೆದು ಬಳಿಕ ಬನಾರಸ್ ನಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು, ದೆಹಲಿಯಲ್ಲಿ ಡಾಕ್ಟರೇಟ್ ಪದವಿ ಪಡೆದರು. 1958ರಲ್ಲಿ ಬಿ.ಎಂ.ಚಿಂತಾಮಣಿ ಇವರನ್ನು ವಿವಾಹವಾದ ಬಳಿಕ ಬನಾರಸ್ ನಲ್ಲಿ 8 ವರ್ಷ ಪ್ರಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. 1969ರಲ್ಲಿ ದೆಹಲಿಗೆ ಬಂದರು. ದೆಹಲಿಯಲ್ಲಿ 38 ವರ್ಷ ಗಾರ್ಗಿ ಕಾಲೇಜಿನಲ್ಲಿ ...

READ MORE

Related Books