About the Author

ಅಳಸಿಂಗರಾಚಾರ್ಯ ದೇವಶಿಖಾಮಣಿ ಅವರು (ಜನನ: 1877 ರಲ್ಲಿ) ಮೂಲತಃ ಮೈಸೂರು ಸಂಸ್ಥಾನದ ಮೇಲುಕೋಟೆಯವರು. ಸುಪ್ರಸಿದ್ಧ ಪಂಡಿತ ವಂಶಜರಾದವರು. ಸಂಸ್ಕೃತ ಕನ್ನಡ ಸಾಹಿತ್ಯದಲ್ಲಿ ವಿಶೇಷ ಪ್ರೌಢಿಮೆ ಪಡೆದಿದ್ದರು. ನಂತರ ಮರಿಮಲ್ಲಪ್ಪ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿದರು. 19 ವರ್ಷ ಮದ್ರಾಸಿನಲ್ಲಿ, 11 ವರ್ಷ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದರು. ನಿವೃತ್ತಿನಂತರವೂ, ಕ್ವೀನ್ ಮೇರೀಜ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. 

ಕೃತಿಗಳು: ಆರ್ಯಮತೋಪಾಖ್ಯಾನ, ಕನ್ನಡ ವಚನರಾಮಾಯಣ, ಘೋರ ಯುರೋಪು ಯುದ್ಧದ ಚರಿತ್ರೆ,, ಚಲ್ವನಾರಾಯಣ ಶತಕಂ, ಚಂಡಕೌಶಿಕ, ಚಾಣಕ್ಯತಂತ್ರ ಚಮತ್ಕಾರಂ, ಚಮತ್ಕಾರಂ ಪೌರನೀತಿ,ಪಂಚಭಾಷಾಪ್ರಹಸನ, ಪ್ರಥಮಚಿಕಿತ್ಸೆ, ಪ್ರಾಣಿಶಾಸ್ತ್ರ, ಭಾಗವತ, ಭಾಗಗಳು, ಮನುಷ್ಯನ ಸಪ್ತಮ ವಯೋವಸ್ಥೆ, ಮಹಾಭಾರತ, ಯುದ್ಧದ ಅನುಭವಗಳು, ಶ್ರೀಮತಿ ಪರಿಣಮಂ, ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ, ಸಸ್ಯಶಾಸ್ತ್ರ, ಸ್ವಪ್ನವಾಸವದತ್ತೆ.

ಅಳಸಿಂಗರಾಚಾರ್ಯ ದೇವಶಿಖಾಮಣಿ